×
Ad

​ಮಿಸ್ಬಾ ಮಹಿಳಾ ಕಾಲೇಜಿನಲ್ಲಿ ಅಲ್ಯುಮಿನಿ ಮೀಟ್

Update: 2021-04-01 23:20 IST

ಸುರತ್ಕಲ್,ಎ.1: ಕಾಟಿಪಳ್ಳ ಮಿಸ್ಬಾ ವುಮೆನ್ಸ್ ಕಾಲೇಜಿನಲ್ಲಿ ಮಿಸ್ಬಾ ಅಲ್ಯುಮಿನಿ ಮೀಟ್- 2021 ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ರಾಷ್ಟ್ರಮಟ್ಟದಲ್ಲಿ ಸಿಎ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಉಪ್ಪಿನಂಗಡಿಯ ಮುಹಮ್ಮದ್ ತಬಿಶ್ ಹಸನ್ ಮತ್ತು ಬೆಳ್ತಂಗಡಿಯ ಎಂ. ಆಯಿಶಾ ಅವರನ್ನು ಹಾಗೂ ಉದ್ಯಮ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವ ದಾನಿಗಳನ್ನು ಗೌರವಿಸಲಾಯಿತು.

ಮಿಸ್ಬಾ ನಾಲೆಡ್ಜ್ ಫೌಂಡೇಷನ್‌ನ ಪ್ರಧಾನ ಕಾರ್ಯದರ್ಶಿ ಡಾ.ಅಬ್ದುಲ್ ರಶೀದ್ ಝೈನಿ ಅಲ್ ಕಮಿಲ್ ಸಖಾಫಿ ದಿಕ್ಸೂಚಿ ಭಾಷಣಗೈದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಬಿ.ಎಂ.ಮಮ್ತಾಝ್ ಆಲಿ ಶಿಕ್ಷಣ ಪಡೆದದವರಿಗೆ ಸಮಾಜದಲ್ಲಿ ಸದಾ ಕಾಲ ಗೌರವವಿದೆ. ಸುಶಿಕ್ಷಿತರು ಸಮುದಾಯಕ್ಕೆ ಗೌರವ ತರುತ್ತಾರೆ. ಇದಕ್ಕೆ ಸಿಎ ಮಾಡಿದ ವಿದ್ಯಾರ್ಥಿಗಳು ಉದಾಹರಣೆ ಎಂದರು.

ಎನ್‌ಆರ್‌ಐ ಉದ್ಯಮಿಗಳಾದ ಹಸನ್ ಶಹೀದ್, ಮುಹಮ್ಮದ್ ಶಬೀರ್, ಟ್ರಸ್ಟಿಗಳಾದ ಶೇಖ್ ಅಹ್ಮದ್ ಶರೀಫ್, ಇಸ್ಮಾಯಿಲ್ ಎಚ್‌ಎನ್‌ಜಿಸಿ, ನಾಸೀರ್ ಲಕ್ಕಿಸ್ಟಾರ್, ಮುಬೀನ್, ಸುಹೈಬ್, ಮೆಹಬೂಬ್, ಫಕ್ರುದ್ದೀನ್, ಸಂಸ್ಥೆಯ ಸಂಚಾಲಕ ಬಿ.ಎ ನಝೀರ್, ಪ್ರಾಂಶುಪಾಲೆ ಝಹಿದಾ ಜಲೀಲ್ ಉಪಸ್ಥಿತರಿದ್ದರು.

ಮಿಸ್ಬಾ ಶರಿಯತ್ ಕಾಲೇಜಿನ ಮೌಲಾನ ಹಬೀಬ್ ಸಖಾಫಿ ದುಆಗೈದರು. ಮಮತಾ ಮತ್ತು ನುಬೀರಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News