×
Ad

ಬಾಂಗ್ಲಾ ದೇಶವನ್ನು ಸೋಲಿಸಿದ ನ್ಯೂಝಿಲ್ಯಾಂಡ್‌ಗೆ ಸರಣಿ

Update: 2021-04-02 00:11 IST

ಆಕ್ಲಂಡ್: ಮಳೆಬಾಧಿತ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯ ದಲ್ಲಿ ಆತಿಥೇಯ ನ್ಯೂಝಿಲ್ಯಾಂಡ್ ತಂಡ ಬಾಂಗ್ಲಾದೇಶವನ್ನು 65 ರನ್‌ಗಳಿಂದ ಮಣಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್‌ಸ್ವೀಪ್ ಸಾಧಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ 10 ಓವರ್‌ಗಳಿಗೆ ಕಡಿತಗೊಂಡಿರುವ ಪಂದ್ಯದಲ್ಲಿ ಗೆಲ್ಲಲು 142 ರನ್ ಬೆನ್ನಟ್ಟಿದ ಬಾಂಗ್ಲಾದೇಶ 9.3 ಓವರ್‌ಗಳಲ್ಲಿ ಕೇವಲ 76 ರನ್ ಗಳಿಸಿ ಆಲೌಟಾಗಿತ್ತು. ನ್ಯೂಝಿಲ್ಯಾಂಡ್ ಸ್ಪಿನ್ನರ್ ಟಾಡ್ ಅಸ್ಟ್ಲೆ 2 ಓವರ್‌ಗಳ ಸ್ಪೆಲ್‌ನಲ್ಲಿ 13 ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು. ಹಿರಿಯ ವೇಗದ ಬೌಲರ್ ಟಿಮ್ ಸೌಥಿ 15 ರನ್‌ಗೆ 3 ವಿಕೆಟ್‌ಗಳನ್ನು ಪಡೆದರು. ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿದ್ದ ನ್ಯೂಝಿಲ್ಯಾಂಡ್ ತಂಡ 10 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿತ್ತು. ನ್ಯೂಝಿಲ್ಯಾಂಡ್‌ನ ಅಗ್ರ ಸರದಿಯ ಬ್ಯಾಟ್ಸ್‌ಮನ್ ಫಿನ್ ಅಲ್ಲೆನ್ 29 ಎಸೆತಗಳಲ್ಲಿ 71 ರನ್(10 ಬೌಂಡರಿ, 3 ಸಿಕ್ಸರ್) ಸಿಡಿಸಿದ್ದರು. ಮಾರ್ಟಿನ್ ಗಪ್ಟಿಲ್ (44 ರನ್,19 ಎಸೆತ)ಅವರೊಂದಿಗೆ ಇನಿಂಗ್ಸ್ ಆರಂಭಿಸಿ ಮೊದಲ ವಿಕೆಟ್‌ಗೆ 85 ರನ್ ಸೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News