×
Ad

ಮಿಯಾಮಿ ಓಪನ್ : ಮೆಡ್ವೆಡೆವ್, ಒಸಾಕಾ ಪರಾಭವ

Update: 2021-04-02 00:15 IST

ಮಿಯಾಮಿ : ಅಗ್ರ ಶ್ರೇಯಾಂಕದ ಆಟಗಾರ ಡ್ಯಾನಿಲ್ ಮೆಡ್ವೆಡೆವ್ ಹಾಗೂ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ನವೊಮಿ ಒಸಾಕಾ ಮಿಯಾಮಿ ಓಪನ್ ಟೆನಿಸ್ ಟೂರ್ನಿಯಲ್ಲಿ ಸೋತು ನಿರ್ಗಮಿಸಿದ್ದಾರೆ.

ಸ್ಪೇನ್‌ನ ಏಳನೇ ಶ್ರೇಯಾಂಕದ ರಾಬರ್ಟೊ ಬೌಟಿಸ್ಟಾ ಅಗುಟ್ ಅವರು ರಶ್ಯದ ಮೆಡ್ವೆಡೆವ್‌ರನ್ನು 6-4, 6-2 ಸೆಟ್‌ಗಳ ಅಂತರದಿಂದ ಮಣಿಸಿದ್ದು, ಮಡ್ವೆಡೆವ್ ವಿರುದ್ಧದ ಆಡಿರುವ 3ನೇ ಪಂದ್ಯದಲ್ಲಿ ಮೂರನೇ ಗೆಲುವು ಇದಾಗಿದೆ. ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್‌ಗೆ ಶರಣಾಗಿ ರನ್ನರ್-ಅಪ್ ಆಗಿರುವ ಮಡ್ವೆಡೆವ್‌ಗೆ ಈ ಸೋಲು ನಿರಾಸೆ ತಂದಿದೆ.

ಇದೇ ವೇಳೆ ವಿಶ್ವದ ನಂ.2ನೇ ಆಟಗಾರ್ತಿ ಒಸಾಕಾ ಗ್ರೀಸ್‌ನ ಮರಿಯಾ ಸಕ್ಕಾರಿ ವಿರುದ್ಧ 0-6 , 4-6 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಈ ಸೋಲಿನೊಂದಿಗೆ ಜಪಾನ್‌ನ ಸ್ಟಾರ್ ಆಟಗಾರ್ತಿಯ ಸತತ 23 ಪಂದ್ಯಗಳ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ.

ಆಸ್ಟ್ರೇಲಿಯನ್ ಓಪನ್‌ನಲ್ಲಿ ನಾಲ್ಕನೇ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ ಬಳಿಕ ಮೊದಲ ಟೂರ್ನಮೆಂಟ್ ಆಡಿರುವ ಒಸಾಕಾ ಮೊದಲ ಸೆಟ್‌ನಲ್ಲಿ ಕೇವಲ 8 ಅಂಕ ಗಳಿಸಿದ್ದರು. ಎರಡನೇ ಗೇಮ್‌ನಲ್ಲಿ ಮುನ್ನಡೆ ಪಡೆದಿದ್ದರೂ ಎದುರಾಳಿ ಸಕ್ಕಾರಿ ತಿರುಗೇಟು ನೀಡಿದರು.

ಮಡ್ವೆಡೆವ್‌ರನ್ನು ಮಣಿಸಿರುವ ಬೌಟಿಸ್ಟಾ ಮುಂದಿನ ಸುತ್ತಿನಲ್ಲಿ 19ರ ಹರೆಯದ ಇಟಲಿಯ ಜಾನ್ನಿಕ್ ಸಿನ್ನೆರ್‌ರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News