ಬಸ್ ತಡೆದು ಯುವಕನಿಗೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 8 ಮಂದಿ ವಶಕ್ಕೆ: ಕಮಿಷನರ್
Update: 2021-04-02 14:15 IST
ಮಂಗಳೂರು, ಎ.2: ಮಂಗಳೂರಿನಿಂದ ಬೆಂಗಳೂರಿಗೆ ಜತೆಯಾಗಿ ಖಾಸಗಿ ಬಸ್ ನಲ್ಲಿ ಯುವತಿ ಜೊತೆ ಪ್ರಯಾಣಿಸುತ್ತಿದ್ದ ಆರೋಪದಲ್ಲಿ ಜೋಕಟ್ಟೆ ಪರಿಸರ ನಿವಾಸಿ ಅಸ್ವಿದ್ ಅನ್ವರ್ ಮುಹಮ್ಮದ್ ಎಂಬ ಯುವಕನಿಗೆ ಕಳೆದ ರಾತ್ರಿ ಹಲ್ಲೆ ನಡಸಿದ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳೂರು ಪೊಲೀಸ್ ಅಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಯುವಕನಿಗೆ ಹಲ್ಲೆ ವೇಳೆ ಹರಿತವಾದ ಆಯುಧ ಕೂಡ ಬಳಸಲಾಗಿದೆ. ಗಾಯಾಳು ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಯುವಕ ಮತ್ತು ಯುವತಿ ಈ ಹಿಂದೆ ಸಹಪಾಠಿಗಳಾಗಿದ್ದರು. ಹಲ್ಲೆ ಆರೋಪಿಗಳ ಪತ್ತೆಗಾಗಿ ಡಿಸಿಪಿ ಮತ್ತು ಎಸಿಪಿ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚಿಸಲಾಗಿದೆ. ಎಲ್ಲ ಆರೋಪಿಗಳನ್ನು ಶೀಘ್ರ ಬಂಧಿಸಲಾಗುವುದು ಎಂದವರು ತಿಳಿಸಿದ್ದಾರೆ.