"ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಇವಿಎಂ ದೊರಕಿದ ಪ್ರಕರಣ ನಡೆದಿದ್ದರೆ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು"

Update: 2021-04-02 14:17 GMT

ಹೊಸದಿಲ್ಲಿ: ಇಂದು ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಅಭ್ಯರ್ಥಿಯ ಪತ್ನಿಯ ಕಾರಿನಲ್ಲಿ ಇವಿಯಂ ಯಂತ್ರಗಳು, ವಿವಿಪ್ಯಾಟ್‌ ಪತ್ತೆಯಾಗಿತ್ತು. ಈ ಕುರಿತಾದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಪ್ರಕರಣದ ಕುರಿತಾದಂತೆ indiatoday.in ನೊಂದಿಗೆ ಮಾತನಾಡಿದ ಗೃಹ ಸಚಿವ ಅಮಿತ್‌ ಶಾ, "ಈ ಪ್ರಕರಣದ ಕುರಿತು ಹೆಚ್ಚಿನ ವಿವರ ನನಗೆ ತಿಳಿದಿಲ್ಲ. ಒಂದು ವೇಳೆ ಇದು ನಡೆದಿದ್ದೇ ಆದಲ್ಲಿ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಹೇಳಿಕೆ ನೀಡಿದ್ದಾಗಿ ವರದಿ ತಿಳಿಸಿದೆ.

"ಈ ಪ್ರಕರಣದ ವಿವರಗಳ ಬಗ್ಗೆ ನನಗೆ ತಿಳಿದಿಲ್ಲ. ನಾನು ನಿನ್ನೆ ದಕ್ಷಿಣ ಭಾರತದಲ್ಲಿ ಪ್ರಚಾರ ಮಾಡುತ್ತಿದ್ದೆ. ವಿವರಗಳನ್ನು ಪಡೆಯುತ್ತೇನೆ. ಚುನಾವಣಾ ಆಯೋಗವು ಯಾವುದೇ ಹೆಜ್ಜೆ ಇಡುವುದಕ್ಕೆ ನಾವೆಂದೂ ತಡೆಯಾಗಲಿಲ್ಲ. ನೀವು ಹೇಳುವುದು ನಿಜವಾಗಿ ನಡೆದಿದ್ದರೆ ಚುನಾವಣಾ ಆಯೋಗ ಕಾನೂನಿನ ಪ್ರಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಭಾಗಿಯಾಗಿರುವವರ ವಿರುದ್ಧವೂ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು "ಎಂದು ಅಮಿತ್ ಶಾ ಹೇಳಿದ್ದಾಗಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News