×
Ad

ಹೊಸ ಮನೆಯ ಕನಸು, ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಅಶ್ರಫ್

Update: 2021-04-02 21:46 IST

ಮಂಗಳೂರು, ಎ.2: ಕೊಣಾಜೆ ಸಮೀಪದ ಅಸೈಗೋಳಿಯ ತಿಪ್ಲೆಪದವು ಎಂಬಲ್ಲಿನ ನಿವಾಸಿ ಮುಹಮ್ಮದ್ ಅಶ್ರಫ್ ಎಂಬವರು ತನ್ನ ಹಿರಿಯರು ಕಟ್ಟಿಸಿದ ಹಳೆಯ ಮನೆಯೊಂದರಲ್ಲಿ ವಾಸವಾಗಿದ್ದಾರೆ. ಆದರೆ ಈ ಮನೆಯು ವಾಸಕ್ಕೆ ಯೋಗ್ಯವಾಗಿಲ್ಲ. ಹಾಗಾಗಿ ಹೊಸ ಮನೆಯ ಕನಸು ಕಂಡಿರುವ ಅಶ್ರಫ್ ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಅಶ್ರಫ್‌ಗೆ ಪತ್ನಿ ಮತ್ತು ನಾಲ್ಕು ಮಂದಿ ಮಕ್ಕಳಿದ್ದಾರೆ. ಕೊರೋನ-ಲಾಕ್‌ಡೌನ್ ಬಳಿಕ ಸರಿಯಾದ ಕೆಲಸವೂ ಇಲ್ಲ. ಹಾಗಾಗಿ ಹಸಿವು ನೀಗಿಸುವುದೇ ಸಮಸ್ಯೆಯಾಗಿದೆ. ಈ ಮಧ್ಯೆ ಇವರ ಹಿರಿಯರು ಕಟ್ಟಿಸಿದ ಮನೆಯು ಮೊನ್ನೆಯ ಮುಂಗಾರು ಪೂರ್ವ ಮಳೆಗೆ ಸೋರಿದೆ. ಬಿರುಕೂ ಬಿಟ್ಟಿದೆ. ಅದನ್ನು ಕಂಡ ಸಹೃದಯಿಯೊಬ್ಬರು ಈ ಮನೆಗೆ ಟರ್ಪಾಲು ಹಾಕಿ ಕೊಟ್ಟಿದ್ದಾರೆ. ಆದರೆ ಈ ಸೋರುವ ಮನೆಯಲ್ಲಿ ಮುಂದಿನ ಮಳೆಗಾಲದಲ್ಲಿ ನೆಮ್ಮದಿಯ ದಿನ ಕಳೆಯುವ ಬಗ್ಗೆ ಅಶ್ರಫ್‌ಗೆ ವಿಶ್ವಾಸವಿಲ್ಲ. ಹಾಗಾಗಿ ಹೊಸದಾದ ಪುಟ್ಟ ಮನೆಯೊಂದರ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ದಾನಿಗಳ ನೆರವನ್ನು ಬಯಸಿದ್ದಾರೆ.

ಆಸಕ್ತರು ಮುಹಮ್ಮದ್ ಆಶ್ರಫ್, ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾದ ಅತ್ತಾವರ ಬ್ರಾಂಚ್, ಉಳಿತಾಯ ಖಾತೆ ಸಂಖ್ಯೆ-31801309687 (ಐಎಫ್‌ಎಸ್‌ಸಿ ಕೋಡ್-SBIN0001919)ಗೆ ಸಹಾಯಧನ ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಅಶ್ರಫ್‌ರನ್ನು (ಮೊ.ಸಂ: 9916081415)ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News