ಗಾಂಜಾ ಸೇವನೆ : ಮೂವರ ಸೆರೆ
Update: 2021-04-02 22:11 IST
ಮಂಗಳೂರು, ಎ.2: ಕಾವೂರು ಸಮೀಪದ ಗಾಂಧಿನಗರ ಬಸ್ ನಿಲ್ದಾಣದ ಬಳಿ ಗಾಂಜಾ ಸೇವಿಸುತ್ತಿದ್ದ ಮೂವರನ್ನು ಕಾವೂರು ಎಸ್ಸೈ ಪ್ರತಿಭಾ ಕೆಎಚ್ ನೇತೃತ್ವದ ಪೊಲೀಸ್ ತಂಡ ಗುರುವಾರ ಅಪರಾಹ್ನ ಬಂಧಿಸಿದೆ.
ಆರೋಪಿಗಳನ್ನು ಶರಣ್ (20), ಶರತ್ (21), ದಫೀರ್ (21) ಎಂದು ಗುರುತಿಸಲಾಗಿದೆ. ಗುರುವಾರ ಅಪರಾಹ್ನ ಸುಮಾರು 3 ಗಂಟೆಗೆ ಆರೋಪಿಗಳು ಗಾಂಧಿನಗರ ಬಸ್ ನಿಲ್ದಾಣದ ಬಳಿ ಕುಳಿತು ಸಿಗರೇಟ್ ಸೇದುತ್ತಿದ್ದರು. ಪೊಲೀಸರು ವಿಚಾರಿಸಿದಾಗ ಅಸ್ಪಷ್ಟ ಉತ್ತರ ನೀಡಿದರು. ತಕ್ಷಣ ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆ ಮಾಡಿಸಿದಾಗ ಸಿಗರೇಟಿನೊಳಗೆ ಗಾಂಜಾ ಮಿಶ್ರಣ ಮಾಡಿ ಸೇವಿಸುತ್ತಿರುವುದು ಬೆಳಕಿಗೆ ಬಂದಿದೆ.
ಆರೋಪಿಗಳ ವಿರುದ್ಧ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.