ತೆಂಕ ಎಡಪದವು: ಜೂಜಾಡುತ್ತಿದ್ದ ಮೂವರ ಸೆರೆ
Update: 2021-04-02 22:13 IST
ಮಂಗಳೂರು, ಎ.2: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ತೆಂಕ ಎಡಪದವು ಸಮೀಪದ ಪೂಪಾಡಿಕಲ್ಲು ಎಂಬಲ್ಲಿ ಗುರುವಾರ ಇಸ್ಟೀಟ್ ಜೂಜಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಿಮಕರ ಪೂಜಾರಿ (40), ಸೂರಜ್ (28), ಸಂತೋಷ್ ನಾಯ್ಕ (26) ಬಂಧಿತರು. ನಿತ್ಯಾ ಯಾನೆ ಚೆನ್ನಕೇಶವ ಮತ್ತು ದಿನೇಶ್ ಸಹಿತ ಆರೋಪಿಗಳು ಪೂಪಾಡಿಕಲ್ಲು ಎಂಬಲ್ಲಿ ಜೂಜಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಗುರುವಾರ ಸಂಜೆ ಸುಮಾರು 5:45ಕ್ಕೆ ದಾಳಿ ನಡೆಸಿದರು. ಅಷ್ಟರಲ್ಲಿ ಮೂವರು ಸೆರೆ ಸಿಕ್ಕರೆ ನಿತ್ಯಾ ಮತ್ತು ದಿನೇಶ್ ಎಂಬವರು ತಪ್ಪಿಸಿಕೊಂಡಿದ್ದಾರೆ. ಐವರ ವಿರುದ್ಧವೂ ಪ್ರಕರಣ ದಾಖಲಿಸಿ ರುವ ಪೊಲೀಸರು ಆರೋಪಿಗಳಿಂದ 2,500 ರೂ.ನಗದು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.