×
Ad

ತೆಲಂಗಾಣ: ಮಾವು ಕಳವುಗೈದರೆಂದು ಶಂಕಿಸಿ ಬಾಲಕರಿಬ್ಬರ ಕಟ್ಟಿ ಹಾಕಿ ಥಳಿತ

Update: 2021-04-02 22:22 IST
photo: twitter

ಹೈದರಾಬಾದ್, ಎ. 2: ತೋಟದಿಂದ ಮಾವಿನ ಹಣ್ಣು ಕಳವುಗೈದ ಶಂಕೆಯಲ್ಲಿ ಇಬ್ಬರು ಅಮಾಯಕ ಅಪ್ರಾಪ್ತ ಬಾಲಕರನ್ನು ಕಟ್ಟಿ ಹಾಕಿ ಥಳಿಸಿದ ಹಾಗೂ ಸೆಗಣಿ ತಿನ್ನಿಸಿದ ಆರೋಪದಲ್ಲಿ ಇಬ್ಬರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಬಾಲಕರನ್ನು ಹಗ್ಗದಿಂದ ಕಟ್ಟಿ ಹಾಕಿರುವುದೇ ಅಲ್ಲದೆ, ಅವರಿಗೆ ಥಳಿಸಿದ್ದಾರೆ ಹಾಗೂ ಸೆಗಣಿ ತಿನ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಮೆಹಬೂಬಾಬಾದ್ ಜಿಲ್ಲೆಯ ತೊರ್ರೂರ್‌ನಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದೆ.

ಇಬ್ಬರು ಬಾಲಕರು ತಮ್ಮ ಸಾಕು ನಾಯಿಯನ್ನು ಹುಡುಕಿಕೊಂಡು ಗ್ರಾಮದ ಹೊರವಲಯಕ್ಕೆ ತೆರಳಿದ್ದರು. ಈ ಸಂದರ್ಭ ಮಾವಿನ ತೋಟದಲ್ಲಿ ಕಾವಲು ಕಾಯುತ್ತಿದ್ದ ಇಬ್ಬರು ಬಾಲಕರು ಸೆರೆ ಹಿಡಿದಿದ್ದರು. ‘‘ನಾವು ಸಾಕು ನಾಯಿಯನ್ನು ಹುಡುಕಿಕೊಂಡು ಇಲ್ಲಿಗೆ ಬಂದೆವು’’ ಎಂದು ಬಾಲಕರಿಬ್ಬರು ಹೇಳಿದರು. ಆದರೆ, ಅವರು ಯಾವುದೇ ಕರುಣೆ ತೋರಿಸಲಿಲ್ಲ. ಅವರು ಬಾಲಕರನ್ನು ಹಗ್ಗದಿಂದ ಕಟ್ಟಿ ಹಾಕಿದರು ಹಾಗೂ ನಿರಂತರ ಥಳಿಸಿದರು ಎನ್ನಲಾಗಿದೆ. ಅನಂತರ ಸೆಗಣಿಯನ್ನು ಬಾಲಕರ ಮುಖಕ್ಕೆ ಮೆತ್ತಿದರು ಹಾಗೂ ತಿನ್ನಿಸಿದರು. ಈ ನಾಚಿಕೆಗೇಡು ವರ್ತನೆಯನ್ನು ಅವರು ತಮ್ಮ ಮೊಬೈಲ್‌ನಲ್ಲಿ ದಾಖಲಿಸಿದರು. ಹಾಗೂ ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಶೇರ್ ಮಾಡಿದರು. ಈ ವೀಡಿಯೊ ವೈರಲ್ ಆದಾಗ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಾರ್ಯಪ್ರವೃತ್ತವಾದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News