ತೈವಾನ್: ರೈಲು ಹಳಿ ತಪ್ಪಿ ಕನಿಷ್ಠ 48 ಸಾವು

Update: 2021-04-02 17:58 GMT

ತೈಪೆ (ತೈವಾನ್), ಎ. 2: ಪೂರ್ವ ತೈವಾನ್‌ನಲ್ಲಿ ಶುಕ್ರವಾರ ಸುರಂಗವೊಂದರ ಒಳಗೆ ಪ್ರಯಾಣಿಕರಿಂದ ಕಿಕ್ಕಿರಿದಿದ್ದ ರೈಲೊಂದು ಹಳಿ ತಪ್ಪಿದ್ದು, ಕನಿಷ್ಠ 48 ಮಂದಿ ಮೃತಪಟ್ಟಿದ್ದಾರೆ. ಇದು ದಶಕಗಳಲ್ಲೇ ದ್ವೀಪ ರಾಷ್ಟ್ರದ ಅತ್ಯಂತ ಭೀಕರ ರೈಲು ಅಪಘಾತವಾಗಿದೆ.

ಕನಿಷ್ಠ 48 ಮಂದಿ ಮೃತಪಟ್ಟಿರುವುದು ಖಚಿತಪಟ್ಟಿದೆ ಹಾಗೂ 66 ಮಂದಿ ಗಾಯಗೊಂಡಿದ್ದಾರೆ ಎಂದು ತೈವಾನ್‌ನ ರಾಷ್ಟ್ರೀಯ ಅಗ್ನಿಶಾಮಕ ಸಂಸ್ಥೆ ತಿಳಿಸಿದೆ.

ಕರಾವಳಿ ನಗರ ಹುವಾಲೀನ್‌ನಲ್ಲಿ ನಿರ್ವಹಣಾ ವಾಹನವೊಂದು ಕಟ್ಟೆಯೊಂದರಿಂದ ಜಾರಿ ರೈಲಿಗೆ ಢಿಕ್ಕಿ ಹೊಡೆದಾಗ ಅಪಘಾತ ಸಂಭವಿಸಿರಬಹುದಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

‘‘ನಿರ್ವಹಣಾ ಕಾಮಗಾರಿಯಲ್ಲಿ ತೊಡಗಿದ್ದ ವಾಹನವೊಂದು ಸರಿಯಾಗಿ ನಿಲಗಡೆಯಾಗಿರಲಿಲ್ಲ. ಅದು ಆಕಸ್ಮಕವಾಗಿ ರೈಲು ಹಳಿಗೆ ಜಾರಿತು’’ ಎಂದು ಹುವಾಲೀನ್ ಕೌಂಟಿಯ ಪೊಲೀಸ್ ಮುಖ್ಯಸ್ಥ ತ್ಸಾಯಿ ಡಿಂಗ್ ಹಸೀನ್ ಸುದ್ದಿಗಾರರಿಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News