ಪರಮಾಣು ಒಪ್ಪಂದ ಸಭೆಯಲ್ಲಿ ಭಾಗವಹಿಸುವೆ: ಅಮೆರಿಕ

Update: 2021-04-02 18:19 GMT

ವಾಶಿಂಗ್ಟನ್, ಎ. 2: ಇರಾನ್ ಪರಮಾಣು ಒಪ್ಪಂದದ ಬಗ್ಗೆ ಮುಂದಿನ ವಾರ ವಿಯೆನ್ನಾದಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಅಮೆರಿಕ ಶುಕ್ರವಾರ ಪ್ರಕಟಿಸಿದೆ ಹಾಗೂ ಇರಾನ್‌ನೊಂದಿಗೆ ಕುಳಿತು ಈ ವಿಷಯದಲ್ಲಿ ಮಾತುಕತೆ ನಡೆಸುವ ಭರವಸೆಯನ್ನು ನೀಡಿದೆ.

‘‘ಇದೀಗ ಆರಂಭದ ದಿನಗಳು. ತಕ್ಷಣಕ್ಕೆ ಪ್ರಗತಿಯಾಗುವ ನಿರೀಕ್ಷೆಯನ್ನು ನಾವು ಹೊಂದಿಲ್ಲ. ಯಾಕೆಂದರೆ, ಮುಂದೆ ಕಠಿಣ ಮಾತುಕತೆಗಳು ನಡೆಯಲಿಕ್ಕಿವೆ. ಆದರೆ, ಇದು ಪ್ರಗತಿಯ ನಿಟ್ಟಿನಲ್ಲಿ ಇಟ್ಟಿರುವ ಆರೋಗ್ಯಯುತ ಹೆಜ್ಜೆ ಎಂಬುದಾಗಿ ನಾವು ಭಾವಿಸುತ್ತೇವೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ಹೇಳಿದರು.

ಜಗತ್ತಿನ ಪ್ರಭಾವಿ ದೇಶಗಳು ಇರಾನ್ ಜೊತೆಗೆ ಸಹಿ ಹಾಕಿರುವ 2015ರ ಪರಮಾಣು ಒಪ್ಪಂದದ ಬಗ್ಗೆ ಚರ್ಚಿಸಲು ವಿಯೆನ್ನಾದಲ್ಲಿ ಸಂಬಂಧಪಟ್ಟ ಎಲ್ಲ ಪಕ್ಷಗಳ ಮುಖಾಮುಖಿ ಸಭೆಯೊಂದನ್ನು ನಡೆಸುವುದಾಗಿ ಐರೋಪ್ಯ ಒಕ್ಕೂಟವು ಶುಕ್ರವಾರ ಘೋಷಿಸಿದೆ. ಅಮೆರಿಕದ ನಿಕಟಪೂರ್ವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕವನ್ನು ಈ ಒಪ್ಪಂದದಿಂದ ಹೊರತಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News