ಹೋಪ್ ಇಂಡಿಯಾ ಫೌಂಡೇಶನ್‌ನ ಲಾಂಛನ ಅನಾವರಣ
Update: 2021-04-03 22:10 IST
ಉಡುಪಿ, ಎ.3: ಜನಸೇವೆ ಹಾಗೂ ಸಮಾಜ ಸೇವೆ ಉದ್ದೇಶದಿಂದ ಸ್ಥಾಪನೆಯಾಗಲಿರುವ ಹೋಪ್ ಇಂಡಿಯಾ ಫೌಂಡೇಶನ್‌ನ ಲಾಂಛನವನ್ನು ಉಡುಪಿ ತಹಶೀಲ್ದಾರ್ ಪ್ರದೀಪ್ ಎಸ್.ಕುರ್ಡೇಕರ್ ಶನಿವಾರ ಮಣಿಪಾಲ ಇನ್ ಹೋಟೆಲ್‌ನ ಕನ್ವೆಂಷನ್ ಸೆಂಟರ್ ನಲ್ಲಿ ಅನಾವರಣಗೊಳಿಸಿದರು.
ಮನೋವೈದ್ಯ ಡಾ.ಪಿ.ವಿ.ಭಂಡಾರಿ, ರಾಜಕೀಯ ಮುಖಂಡ ಅಮೃತ್ ಶೆಣೈ, ಸಾಮಾಜಿಕ ಕಾರ್ಯಕರ್ತರಾದ ಬಿ.ಎಂ.ಜಾರ್ ತೋನ್ಸೆ, ಸ್ಟೀವನ್ ಕುಲಾಸೋ, ಕಾರ್ತಿಕ್ ಕುಂದರ್, ಫೌಂಡೇಶನ್ ಪ್ರಮುಖ ಅನ್ಸಾರ್ ಅಹ್ಮದ್ ಉಪಸ್ಥಿತರಿದ್ದರು.