ರನ್ ಬೆನ್ನಟ್ಟುವ ವೇಳೆ ಗರಿಷ್ಠ ಸ್ಕೋರ್ ದಾಖಲಿಸಿದ ಫಖರ್ ಝಮಾನ್

Update: 2021-04-05 06:28 GMT
ಫಾಖರ್ ಝಮಾನ್ (Photo credit: twitter @TheRealPCBMedia)

ಜೊಹಾನ್ಸ್‌ಬರ್ಗ್, ಎ.5: ಪಾಕಿಸ್ತಾನದ ಯುವ ಕ್ರಿಕೆಟಿಗ, ಆರಂಭಿಕ ಬಾಟ್ಸ್‌ಮನ್ ಫಾಖರ್ ಝಮಾನ್ ರವಿವಾರ, ಏಕದಿನ ಕ್ರಿಕೆಟ್ ಪಂದ್ಯದಲ್ಲಿ ರನ್ ಬೆನ್ನಟ್ಟುವ ವೇಳೆ ಗರಿಷ್ಠ ಸ್ಕೋರ್ ಗಳಿಸಿದ ವಿಶ್ವದಾಖಲೆ ಸ್ಥಾಪಿಸಿದರು.

ಅತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 10 ಸಿಕ್ಸರ್ ಹಾಗೂ 18 ಬೌಂಡರಿಗಳನ್ನೊಳಗೊಂಡ ಸಿಡಿಲಬ್ಬರದ 193 ರನ್ ಸಿಡಿಸಿದ ಯುವ ಕ್ರಿಕೆಟಿಗ, ಆಸ್ಟ್ರೇಲಿಯಾದ ಶೇನ್ ವಾಟ್ಸನ್ ದಾಖಲೆಯನ್ನು ಪುಡಿಗಟ್ಟಿದರು. ವಾಟ್ಸನ್ 185 ರನ್ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು. ಝಯಾನ್ ಅವರ ವೀರೋಚಿತ ಹೋರಾಟದ ನಡುವೆಯೂ ಪಾಕಿಸ್ತಾನ 17 ರನ್‌ಗಳ ಸೋಲು ಅನುಭವಿಸಿತು.

ಗೆಲುವಿಗೆ 342 ರನ್‌ಗಳ ಗುರಿ ಪಡೆದ ಪಾಕಿಸ್ತಾನ ನಿಯತವಾಗಿ ವಿಕೆಟ್ ಕಳೆದುಕೊಳ್ಳುತ್ತಿದ್ದರೂ, ಫಾಖರ್ ವಿಚಲಿತರಾಗದೇ 155 ಎಸೆತಗಳಲ್ಲಿ 193 ರನ್ ಗಳಿಸಿ ಗಮನ ಸೆಳೆದರು. ದಕ್ಷಿಣ ಆಫ್ರಿಕಾದ ಎಡಗೈ ಸ್ಪಿನ್ನರ್ ಶಮ್ಸಿ ವಿರುದ್ಧ ಆರು ಸಿಕ್ಸರ್ ಸಿಡಿಸಿದರು.

ಫಾಖರ್ ಹೊರತುಪಡಿಸಿ ಇತರ ಯಾವ ಬ್ಯಾಟ್ಸ್‌ಮನ್‌ಗಳು ಕೂಡಾ ಪಾಕ್ ನೆರವಿಗೆ ಬಾರದೇ 17 ರನ್‌ಗಳ ಸೋಲು ಅನುಭವಿಸಬೇಕಾಯಿತು. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ, ನಾಯಕ ತೆಂಬಾ ಬವೂಮಾ, ಡಿ ಕಾಕ್, ರಸ್ಸಿ ವ್ಯಾನ್ ಡೆರ್ ಡುಸ್ಸೆಲ್ ಮತ್ತು ಡೇವಿಡ್ ಮಿಲ್ಲರ್ ಅವರ ಅರ್ಧಶತಕಗಳ ನೆರವಿನೊಂದಿಗೆ 50 ಓವರ್‌ಗಳಲಿ 341 ರನ್ ಗಳಿಸಿತ್ತು. ಫಾಖರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News