ಕೋವಿಡ್ ಆತಂಕದ ನಡುವೆಯೂ ʼ23 ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿʼ ಭಾಗಿಯಾದ ಪ್ರಧಾನಿ ಮೋದಿ

Update: 2021-04-05 09:49 GMT

ಹೊಸದಿಲ್ಲಿ: ಕೋವಿಡ್ ಎರಡನೇ ಅಲೆಯ ನಡುವೆಯೂ ಪ್ರಧಾನಿ ನರೇಂದ್ರ ಮೋದಿ  ವಿಧಾನಸಭಾ ಚುನಾವಣೆಗಳಿಗಾಗಿ ಪ್ರಚಾರ ರ‍್ಯಾಲಿಗಳಲ್ಲಿ ಭಾಗವಹಿಸುವುದರಲ್ಲಿ ವ್ಯಸ್ತರಾಗಿದ್ದಾರೆ. ರವಿವಾರದ ತನಕ  ಮೋದಿ 23 ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ್ದರೆ, ಪಶ್ಚಿಮ ಬಂಗಾಳದ ಕೊನೆಯ ಐದು ಹಂತದ ಚುನಾವಣೆಗಳಿಗಾಗಿ ಅವರ ಇನ್ನೂ ಕೆಲವು ಪ್ರಚಾರ ರ್ಯಾಲಿಗಳು ನಡೆಯಲಿವೆ.

ಪ್ರಧಾನಿ ಇಲ್ಲಿಯ ತನಕ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ 16 ರ‍್ಯಾಲಿಗಳನ್ನು ನಡೆಸಿದ್ದರೆ ತಮಿಳುನಾಡು, ಕೇರಳ ಹಾಗೂ ಪುದುಚ್ಚೇರಿಯಲ್ಲಿ ಏಳು ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ.

2017ರಲ್ಲಿ ಮೋದಿ ಗುಜರಾತ್ ವಿಧಾನಸಭಾ ಚುನಾವಣೆಗಳಿಗಾಗಿ 33 ರ‍್ಯಾಲಿಗಳಲ್ಲಿ  ಭಾಗವಹಿಸಿದ್ದರು. ಆದರೂ ಇಲ್ಲಿ ಬಿಜೆಪಿ ಅತ್ಯಂತ ಕಡಿಮೆ ಅಂತರದಿಂದ ಗೆದ್ದಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು. ಮುಂದೆ 2018ರಲ್ಲಿ ಮೋದಿ ಮಧ್ಯ ಪ್ರದೇಶದಲ್ಲಿ 10, ಛತ್ತೀಸಗಢದಲ್ಲಿ ನಾಲ್ಕು ಹಾಗೂ ರಾಜಸ್ಥಾನದಲ್ಲಿ 15 ರ‍್ಯಾಲಿಗಳನ್ನುದ್ದೇಶಿಸಿ ಮಾತನಾಡಿದ್ದರು.  ಮಹಾರಾಷ್ಟ್ರದಲ್ಲಿ 9 ರ‍್ಯಾಲಿಗಳು, ಹರ್ಯಾಣ ಮತ್ತು ಜಾರ್ಖಂಡ್‍ನಲ್ಲಿ ಕ್ರಮವಾಗಿ 4 ಹಾಗೂ 10 ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಮಹಾರಾಷ್ಟ್ರ ಮತ್ತು ಜಾರ್ಖಂಡ್‍ನಲ್ಲಿ ಪಕ್ಷ ಸೋತಿದ್ದರೆ ಹರ್ಯಾಣದಲ್ಲಿ ಜೆಜೆಪಿ ಜತೆ ಚುನಾವಣೋತ್ತರ ಮೈತ್ರಿ ಸಾಧಿಸಿ ಅಧಿಕಾರ ಉಳಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News