×
Ad

ಮನ ಬಂದಂತೆ ಹುತಾತ್ಮರಾಗಲು ನಮ್ಮ ಜವಾನರು ಬಂದೂಕಿನ ಆಹಾರವಲ್ಲ: ರಾಹುಲ್‌ ಗಾಂಧಿ

Update: 2021-04-05 18:33 IST

ಹೊಸದಿಲ್ಲಿ: ಛತ್ತೀಸಗಢದ ಬಿಜಾಪುರ ಎಂಬಲ್ಲಿ ಶನಿವಾರ ನಡೆದ ಅತ್ಯಂತ ಭೀಕರ ನಕ್ಸಲ್ ದಾಳಿಯಲ್ಲಿ 22 ಸಿಆರ್‍ಪಿಎಫ್ ಜವಾನರು ಹತರಾದ ದುರಂತಮಯ ಘಟನೆಯನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಕ್ಸಲ್ ನಿಗ್ರ ಕಾರ್ಯಾಚರಣೆಯನ್ನು ಅತ್ಯಂತ ಕೆಟ್ಟದ್ದಾಗಿ ರೂಪಿಸಲಾಗಿತ್ತು ಹಾಗೂ ಅಸಮರ್ಥವಾಗಿ ಕಾರ್ಯಗತಗೊಳಿಸಲಾಗಿತ್ತು ಎಂದು ಆರೋಪಿಸಿದ್ದಾರೆ.

ಗುಪ್ತಚರ ಅಥವಾ ಕಾರ್ಯಾಚರಣೆ ವೈಫಲ್ಯದಿಂದ ಶನಿವಾರದ ದಾಳಿ ಸಂಭವಿಸಿದೆ ಎಂಬ ಆರೋಪಗಳನ್ನು ಸಿಆರ್‍ಪಿಎಫ್ ಮಹಾನಿರ್ದೇಶಕ ಕುಲದೀಪ್ ಸಿಂಗ್ ಅವರು ಅಲ್ಲಗಳೆದ ನಂತರದ ಬೆಳವಣಿಗೆಯಲ್ಲಿ ರಾಹುಲ್ ಅವರ ಹೇಳಿಕೆ ಬಂದಿದೆ.

"ಗುಪ್ತಚರ ವೈಫಲ್ಯವಿಲ್ಲವೆಂದಾದಲ್ಲಿ 1:1  ಸಾವಿನ ಅನುಪಾತವೆಂದರೆ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಡೆಸಿಲ್ಲ ಎಂಬುದು ಅರ್ಥ" ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ. "ನಮ್ಮ ಜವಾನರು  ಮನಸ್ಸಿಗೆ ಬಂದಂತೆ ಹುತಾತ್ಮರಾಗಲು  ಬಂದೂಕಿನ ಆಹಾರವಲ್ಲ" ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಂತರ ಇನ್ನೊಂದು ಟ್ವೀಟ್ ಮಾಡಿದ ರಾಹುಲ್ "21ನೇ ಶತಮಾನದಲ್ಲಿ ದೇಹಕ್ಕೆ ರಕ್ಷಾಕವಚವಿಲ್ಲದೆ ಇಲ್ಲದೆ ಯಾವುದೇ ಭಾರತೀಯ ಜವಾನ ಯಾವುದೇ ವೈರಿಯನ್ನು ಎದುರಿಸಬಾರದು. ಅದನ್ನು ಪ್ರತಿಯೊಬ್ಬ ಸೈನಿಕನಿಗೆ ಒದಗಿಸಬೇಕು," ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News