ಶಿರ್ವ: ಎ.6ರಂದು ಕೃಷಿ ಮಾಹಿತಿ ಶಿಬಿರ
ಉಡುಪಿ, ಎ.5: ಜಿಲ್ಲಾ ಕೃಷಿಕ ಸಂಘದ ಶಿರ್ವ ವಲಯ ಸಮಿತಿ ಆಯೋಜಿಸಿರುವ ಮಲ್ಲಿಗೆ, ಕಾಳುಮೆಣಸು ಮತ್ತು ಅಡಿಕೆ ಕೃಷಿ ಮಾಹಿತಿ ಸಭೆ ಎ.6ರ ಪೂರ್ವಾಹ್ನ 11 ಗಂಟೆಗೆ ಶಿರ್ವ ಸೊರ್ಪು ಬಿ.ಬಿ. ಮ್ಯಾನ್ಶನ್ ವಠಾರದಲ್ಲಿ ನಡೆಯಲಿದೆ.
ಸೊರ್ಪು ವಿಲಿಯಂ ಡಿಸೋಜಾ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ವಿಲ್ಸನ್ ಡಿಸೋಜಾ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಲಕ್ಷ್ಮಣ ನಾಯಕ್ ಸೊರ್ಪು ಮತ್ತು ಎಲಿಜಾ ಡಿಸೋಜಾ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಭಟ್ ಕುದಿ ಮತ್ತು ಪ್ರಗತಿಪರ ಕೃಷಿಕ ರಾಘವೇಂದ್ರ ನಾಯಕ್ ಕಲ್ಲೊಟ್ಟು ಭಾಗವಹಿಸಲಿದ್ದಾರೆ.
ವೈಜ್ಞಾನಿಕ ಹಾಗೂ ಕಡಿಮೆ ಖರ್ಚಿನಲ್ಲಿ ಲಾಭದಾಯಕವಾಗಿ ಸಾವಯವ ಕ್ರಮದಲ್ಲಿ ಮಲ್ಲಿಗೆ, ಕಾಳುಮೆಣಸು ಮತ್ತು ಅಡಿಕೆ ಕೃಷಿ ಮಾಡುವ ಕ್ರಮಗಳು, ಅವುಗಳ ನಾಟಿ, ಕೀಟ-ರೋಗ ಬಾಧೆಗಳ ನಿರ್ವಹಣೆ ಕುರಿತ ಸಮಗ್ರ ಮಾಹಿತಿಯನ್ನು ಶಿಬಿರದಲ್ಲಿ ನೀಡಲಾಗುವುದು. ಕೃಷಿಕರು, ಕೃಷಿ ಆಸಕ್ತರು ಕೋವಿಡ್- 19 ಹಿನ್ನೆಲೆಯಲ್ಲಿ ಸರಕಾರ ವಿಧಿಸಿರುವ ನಿಯಾಮವಳಿಗಳನ್ನು ತಪ್ಪದೇ ಅನುಸರಿಸಿ ಭಾಗವಹಿಸುವಂತೆ ಕೃಷಿಕ ಸಂಘದ ಪ್ರಕಟಣೆ ವಿನಂತಿಸಿದೆ.