×
Ad

ಎ.7: ನೇರಳಕಟ್ಟೆಯಲ್ಲಿ ಸಾಮೂಹಿಕ ವಿವಾಹ

Update: 2021-04-05 19:15 IST

ಮಂಗಳೂರು, ಎ.5: ದಶಮಾನೋತ್ಸವ ಸಂಭ್ರಮದಲ್ಲಿರುವ ಮಂಗಳೂರಿನ ಅಲ್ ವಫಾ ಚಾರಿಟೆಬಲ್ ಟ್ರಸ್ಟ್ ಎ.7ರಂದು ಪೂ.11ಕ್ಕೆ 12 ಜೋಡಿಗಳ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನ ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಉಡುಪಿ ಜಿಲ್ಲಾ ಸಂಯುಕ್ತ ಖಾಝಿ ಅಲ್‌ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೂರ್ನಡ್ಕ ಪೀರ್ ಮೊಹಲ್ಲಾ ಜಮಾಅತ್‌ನ ಖಾಝಿ ಅಲ್‌ಹಾಜ್ ಬಿ.ಕೆ.ಅಬ್ದುಲ್ ಖಾದಿರ್ ಮುಸ್ಲಿಯಾರ್ ಬಂಬ್ರಾಣ ನಿಕಾಹ್‌ನ ನೇತೃತ್ವ ವಹಿಸಲಿದ್ದಾರೆ. ಅಲ್ವಫಾ ಚಾರಿಟೆಬಲ್ ಟ್ರಸ್ಟ್  ಅಧ್ಯಕ್ಷ ಮುಹಮ್ಮದ್ ಹನೀಫ್ ಗೋಳ್ತಮಜಲು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಶಾಸಕರಾದ ಯು.ಟಿ ಖಾದರ್, ಬಿ.ಎಂ. ಫಾರೂಕ್, ಅಲ್ ಮುಝೈನ್ ಸಂಸ್ಥೆಯ ಆಡಳಿತ ನಿರ್ದೇಶಕ ಬಿ. ಝಕರಿಯಾ ಜೋಕಟ್ಟೆ, ಎಕ್ಸ್ ಪರ್ಟೈಸ್ ಸಂಸ್ಥೆಯ ಉಪಾಧ್ಯಕ್ಷ ಕೆ.ಎಸ್. ಶೇಖಬ್ಬ ಕರ್ನೀರೆ, ಅಬುದಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂನ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್, ವೈಟ್‌ಸ್ಟೋನ್ ಸಂಸ್ಥೆಯ ಆಡಳಿತ ನಿರ್ದೇಶಕ ಬಿ.ಎಂ. ಶರೀಫ್, ಕೀಲು ಮತ್ತು ಮೂಳೆ ರೋಗ ತಜ್ಞ ಡಾ. ಅಬ್ದುಲ್ ಬಶೀರ್ ವಿ.ಕೆ., ಹೈಸಂ ಸ್ಟೀಲ್ಸ್ ನ ಆಡಳಿತ ನಿರ್ದೇಶಕ ಅಹ್ಮದ್ ಶಾಕಿರ್, ಮುಹಮ್ಮದ್ ಫಾರೂಕ್ ಪೋರ್ಟ್‌ಫೋಲಿಯೊ, ಗೋಳ್ತಮಜಲು ಹಾಗೂ ಮನ್ನಾನ್ ಫೌಂಡೇಶನ್‌ನ ಅಧ್ಯಕ್ಷ ಆರಿಫ್ ಬಿ.ಎಂ. ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಕೋವಿಡ್-19 ಹಿನ್ನೆಲೆಯಲ್ಲಿ ಆಹ್ವಾನಿತರಿಗೆ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶವಿದ್ದು, ರಾಜ್ಯ ಸರಕಾರದ ಎಲ್ಲಾ ಮಾರ್ಗಸೂಚಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುವುದು ಎಂದು ಟ್ರಸ್ಟ್  ಪ್ರಧಾನ ಕಾರ್ಯದರ್ಶಿ ಉಮರ್ ಯು.ಎಚ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News