ಆರ್‌ಎಸ್‌ಬಿ ಕೊಂಕಣಿ ‘ಬಾಯೋ’ ಸಿನಿಮಾಕ್ಕೆ ಚಿತ್ರೀಕರಣ
Update: 2021-04-05 20:09 IST
ಮಂಗಳೂರು, ಎ.5: ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದ ಪ್ರಪ್ರಥಮ ಆರ್‌ಎಸ್‌ಬಿ ಕೊಂಕಣಿ ಸಿನಿಮಾ ಕಾಮತ್ ಕ್ರಿಯೇಷನ್ಸ್‌ರವರ ‘ಬಾಯೋ’ದ ಚಿತ್ರೀಕರಣವು ಕಾರ್ಕಳ, ಉಡುಪಿ, ಕಟಪಾಡಿ, ಮಲ್ಪೆ, ಆಗುಂಬೆ, ಬೆಂಗಳೂರಿನ ಸುಂದರ ತಾಣಗಳಲ್ಲಿ ನಡೆದು ಕೊನೆಯ ಹಂತದ ಚಿತ್ರೀಕರಣವು ಶ್ರೀಕ್ಷೇತ್ರ ಆದಿಶಕ್ತಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸಮಾಜದ ಗುರುಗಳಾದ ಕೈವಲ್ಯ ಮಠಾಧೀಶ ಶಿವಾನಂದ ಸರಸ್ವತಿ ಸ್ವಾಮಿ ಮಹಾರಾಜ್‌ರ ಆಶೀರ್ವಾದದೊಂದಿಗೆ ನೆರವೇರಿತು.
ಈ ಸಂದರ್ಭ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಅಶೋಕ್ ನಾಯಕ್, ನಿರ್ಮಾಪಕ ನಾಗೇಂದ್ರ ಕಾಮತ್, ಗೀತಾಂಜಲಿ ಸಿಲ್ಕ್‌ನ ಸಂತೋಷ್ ವಾಗ್ಳೆ, ಮಂಜುನಾಥ್ ನಾಯಕ್ ಕಾರ್ಕಳ, ನಿರ್ದೇಶಕ ರಮಾನಂದ್ ನಾಯಕ್ ಜೋಡುರಸ್ತೆ, ಕ್ಯಾಮರಾಮನ್ ಸುನಾದ್ ಗೌತಮ್, ಮುಖ್ಯ ಪಾತ್ರಧಾರಿ ನಟಿ ಇಳಾ ವಿಟ್ಲಾ ಉಪಸ್ಥಿತರಿದ್ದರು.