×
Ad

ಸಿಕ್ಕಿಂನಲ್ಲಿ ಭೂಕಂಪ, ಅಸ್ಸಾಂ, ಉತ್ತರ ಬಂಗಾಳದಲ್ಲಿ ಕಂಪನ

Update: 2021-04-05 21:34 IST

ಗ್ಯಾಂಗ್ಟಾಕ್: ಸಿಕ್ಕಿಂ ರಾಜಧಾನಿ ಗ್ಯಾಂಗ್ಟಾಕ್ ಬಳಿ ಸೋಮವಾರ ರಾತ್ರಿ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.

ಸಿಕ್ಕಿಂನ ಗ್ಯಾಂಗ್ಟಾಕ್ ಪೂರ್ವ-ಆಗ್ನೇಯ (ಇಎಸ್ಇ) 25 ಕಿ.ಮೀ. ದೂರದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಹೇಳಿದೆ.

ಭೂಕಂಪವು ಮೇಲ್ಮೈಯಿಂದ 10 ಕಿ.ಮೀ ಆಳದಲ್ಲಿ ರಾತ್ರಿ 8:49 ಕ್ಕೆ ಅಪ್ಪಳಿಸಿದೆ.

ವರದಿಗಳ ಪ್ರಕಾರ, ಸಿಕ್ಕಿಂ ಹೊರತುಪಡಿಸಿ, ಅಸ್ಸಾಂ, ಉತ್ತರ ಬಂಗಾಳ ಹಾಗೂ ಬಿಹಾರದಲ್ಲಿ ಭೂಕಂಪದಿಂದ ನಡುಕ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News