ಎ.10: ಮಂಗಳೂರು ವಿವಿ ಘಟಿಕೋತ್ಸವ
Update: 2021-04-05 22:27 IST
ಮಂಗಳೂರು, ಎ.5: ಮಂಗಳೂರು ವಿಶ್ವವಿದ್ಯಾನಿಲಯದ 39ನೇ ವಾರ್ಷಿಕ ಘಟಿಕೋತ್ಸವವು ಎ.10ರಂದು ಪೂ.11ಕ್ಕೆ ವಿವಿಯ ಮಂಗಳಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಮುಖ್ಯ ಘಟಿಕೋತ್ಸವ ಭಾಷಣವನ್ನು ಆನ್‌ಲೈನ್ ಮುಖಾಂತರ ಮಾಡಲಿರುವರು. ರಾಜ್ಯಪಾಲ ಹಾಗೂ ಮಂಗಳೂರು ವಿವಿ ಕುಲಪತಿ ವಾಜುಭಾಯಿ ರೂಡಾಭಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವತ್ಥ ನಾರಾಯಣ ಉಪಸ್ಥಿತರಿರುವರು.