×
Ad

ತ್ಯಾಜ್ಯ ನೀರನ್ನು ನಾಲೆಗೆ: ಸಾರ್ವಜನಿಕರ ಸಹಕಾರಕ್ಕೆ ಮನವಿ

Update: 2021-04-05 22:29 IST

ಮಂಗಳೂರು, ಎ.5: ಪಾಲಿಕೆ ವ್ಯಾಪ್ತಿಯಲ್ಲಿ ಎಡಿಬಿ ನೆರವಿನ ಕ್ವಿಮಿಪ್ ಟ್ರಾಂಚ್-2 ಯೋಜನೆಯಡಿಯಲ್ಲಿ ಕೈಗೊಂಡಿರುವ ಕೊಳಚೆ ನೀರಿನ ಹಳೆಯ ಏರು ಕೊಳವೆಯನ್ನು ಬದಲಾಯಿಸುವ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಪುಶ್ಚೇತನಗೊಳಿಸುವ ಕಾಮಗಾರಿ ಕುದ್ರೋಳಿ ವೆಟ್‌ವೆಲ್‌ನಿಂದ ಕಾವೂರು ಎಸ್‌ಟಿಪಿವರೆಗೆ ನಡೆಯಲಿದೆ.

ಹಾಗಾಗಿ ಕುದ್ರೋಳಿ ವೆಟ್‌ವೆಲ್‌ನಿಂದ ಕಾವೂರು ಎಸ್‌ಟಿಪಿಗೆ ಹೋಗುವ ಪಂಪಿಂಗ್‌ನ್ನು ಎ.7ರಿಂದ 11ರವರೆಗೆ ಸ್ಥಗಿತಗೊಳಿಸಲಾಗುವುದು. ಹಾಗಾಗಿ ಈ ತ್ಯಾಜ್ಯ ನೀರನ್ನು ನಾಲೆಗೆ ಬಿಡಬೇಕಾಗಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಪಾಲಿಕೆ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News