×
Ad

‘ನಕ್ಸಲ್ ಅಂಕಲ್, ದಯವಿಟ್ಟು ನನ್ನ ಅಪ್ಪನನ್ನು ಬಿಟ್ಟುಬಿಡಿ’

Update: 2021-04-05 22:47 IST
ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ಅವರ ಕುಟುಂಬ

ಜಮ್ಮು,ಎ.5: ‘ನಕ್ಸಲ್ ಅಂಕಲ್,ದಯವಿಟ್ಟು ನನ್ನ ಅಪ್ಪನನ್ನು ಬಿಟ್ಟುಬಿಡಿ’; ಇದು ಶನಿವಾರ ಛತ್ತೀಸ್‌ಗಡದಲ್ಲಿ ಮಾವೋವಾದಿಗಳೊಂದಿಗೆ ಗುಂಡಿನ ಕಾಳಗದ ಬಳಿಕ ನಾಪತ್ತೆಯಾಗಿರುವ ಸಿಆರ್‌ಪಿಎಫ್ ಯೋಧ ರಾಕೇಶ್ವರ ಸಿಂಗ್ ಮನ್ಹಾಸ್ ಅವರ ಐದರ ಹರೆಯದ ಪುತ್ರಿ ರಾಘ್ವಿ ಮಾಡಿಕೊಂಡಿರುವ ಮನವಿ. ಜಮ್ಮುವಿನಲ್ಲಿರುವ ಮನ್ಹಾಸ್ ನಿವಾಸದಲ್ಲಿ ರಾಘ್ವಿ ಮಾವೋವಾದಿಗಳ ಒತ್ತೆಸೆರೆಯಿಂದ ತನ್ನ ತಂದೆಯ ಬಿಡುಗಡೆಗಾಗಿ ಈ ಮನವಿಯನ್ನು ಮಾಡಿಕೊಂಡಾಗ ಅಲ್ಲಿದ್ದವರ ಕಣ್ಣುಗಳು ಹನಿಗೂಡಿದ್ದವು.

‘ಪಾಪಾ ಕಿ ಪರಿ ಪಾಪಾ ಕೋ ಬಹುತ್ ಮಿಸ್ ಕರ್ ರಹೀ ಹೈ. ಮೈ ಅಪ್ನೆ ಪಾಪಾ ಸೆ ಬಹುತ್ ಪ್ಯಾರ್ ಕರ್ತೀ ಹೂಂ. ಪ್ಲೀಸ್ ನಕ್ಸಲ್ ಅಂಕಲ್,ಮೇರೆ ಪಾಪಾ ಕೋ ಘರ್ ಭೇಜ್ ದೋ ’ಎಂದು ರಾಘ್ವಿ ನಕ್ಸಲರಿಗೆ ತನ್ನ ಮನವಿಯಲ್ಲಿ ಹೇಳಿದ್ದಾಳೆ. ಹುಡುಗಿ ಇಷ್ಟು ಹೇಳಿ ಮುಗಿಸಿದಾಗ ಆಕೆಯ ಕಣ್ಣುಗಳಿಂದ ಹನಿಗಳು ಕೆನ್ನೆಗೆ ಹರಿಯುತ್ತಿದ್ದವು. ಆಕೆಯ ಚಿಕ್ಕಪ್ಪ ಸೇರಿದಂತೆ ಅಲ್ಲಿದ್ದ ಎಲ್ಲರೂ ಭಾವಪರವಶರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News