ಪೋಲಂಡ್‌ನ ಹುಬರ್ಟ್‌ಗೆ ಮಿಯಾಮಿ ಕಿರೀಟ

Update: 2021-04-05 18:52 GMT

ಮಿಯಾಮಿ: ಇಲ್ಲಿ ನಡೆದ ಮಿಯಾಮಿ ಓಪನ್‌ನಲ್ಲಿ ಪೋಲೆಂಡ್‌ನ ಹುಬರ್ಟ್ ಹರ್ಕಾಕ್ಜ್ ಅವರು ಇಟಲಿಯ ಹದಿಹರೆಯದ ಜಾನಿಕ್ ಸಿನ್ನರ್ ಅವರನ್ನು ಸೋಲಿಸಿ, ಪ್ರಶಸ್ತಿ ಬಾಚಿಕೊಂಡಿದ್ದಾರೆ.

 ಇದು ಎಟಿಪಿ ಮಾಸ್ಟರ್ಸ್‌ನಲ್ಲಿ ಅವರು ಜಯಿಸಿರುವ ಮೊದಲ ಪಂದ್ಯವಾಗಿದೆ. 26ನೇ ಶ್ರೇಯಾಂಕಿತ ಹರ್ಕಾಕ್ಜ್ ನಾಲ್ಕು ಮತ್ತು ಉನ್ನತ ಶ್ರೇಣಿಯ ಆಟಗಾರರನ್ನು ಹೊರಹಾಕಿದ್ದರು

1 ಗಂಟೆ ಮತ್ತು 43 ನಿಮಿಷಗಳ ಕಾಲ ನಡೆದ ಹಣಾಹಣಿಯಲ್ಲಿ ಹುಬರ್ಟ್ ಅವರು ಸಿನ್ನರ್‌ನ್ನು 7-6(7/4), 6-4 ನೇರ ಸೆಟ್‌ಗಳಿಂದ ಮಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News