ಕಟ್ಟೆಕ್ಕಾರ್ ಅಬ್ಬಾಸ್ ಹಾಜಿ,ಕೆ.ಎಂ ಅಬ್ದುಲ್ಲಾ ಹಾಜಿ ಸ್ಮರಣಾರ್ಥ ರಕ್ತದಾನ ಶಿಬಿರ

Update: 2021-04-06 07:27 GMT

ಸುಳ್ಯ : ಕೆಎ21 ಸುಳ್ಯ ವಾಟ್ಸಾಪ್ ಗ್ರೂಪ್, ಗಾಂಧಿರೋಯಲ್ ವಾಟ್ಸಾಪ್ ಗ್ರೂಪ್ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಜಂಟಿ ಆಶ್ರಯದಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಬ್ಲಡ್ ಬ್ಯಾಂಕ್ ಮಂಗಳೂರು ಸಹಭಾಗಿತ್ವದಲ್ಲಿ ಮರ್ಹೂಂ ಕಟ್ಟೆಕ್ಕಾರ್ ಅಬ್ಬಾಸ್ ಹಾಜಿ ಹಾಗೂ ಮರ್ಹೂಂ ಕೆಎಂ ಅಬ್ದುಲ್ಲ ಹಾಜಿ ಸ್ಮರಣಾರ್ಥ ಯಶಸ್ವಿ ರಕ್ತದಾನ ಶಿಬಿರವು ಅನ್ಸಾರಿಯಾ ಎಜುಕೇಷನಲ್ ಸೆಂಟರ್ ಜಟ್ಟಿಪಳ್ಳ ರೋಡ್ ಸುಳ್ಯ ಇದರ ವಠಾರದಲ್ಲಿ ರವಿವಾರ ನಡೆಯಿತು.

ಹಾಜಿ ಆದಂ ಕುಂಞಿ (ಅಧ್ಯಕ್ಷರು ಎಂ.ಜೆ.ಎಂ ಗಾಂಧಿನಗರ) ಸಭಾದ್ಯಕ್ಷತೆ ವಹಿಸಿದ್ದ ರಕ್ತದಾನ ಶಿಬಿರವನ್ನು ಉಮರ್ ಸಖಾಫಿ ಮರ್ದಾಳ ದುವಾಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಡಾ. ರಿಝ್ವಾನ್ ( ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅರಂತೊಡು) ಉದ್ಘಾಟಿಸಿದರು.

ಯಶಸ್ವಿಯಾಗಿ ನಡೆದ ಶಿಬಿರದಲ್ಲಿ 80 ಮಂದಿ ರಕ್ತದಾನ ಮಾಡುವ ಮೂಲಕ ಜೀವದಾನಿಗಳಾದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ  ರಕ್ತನಿಧಿಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಸುದಾಕರ್ ರೈ, ಎಂ.ಬಿ ಸದಾಶಿವ, ರಿಝ್ವಾನ್ ನಾವೂರು, ಅಬ್ದುಲ್ ಮಜೀದ್, ಮುಸ್ತಫಾ ಜನತಾ, ಅಬ್ದುಲ್ ಕಲಾಂ, ರಶೀದ್ ಜಟ್ಟಿಪಳ್ಳ, ರಿಯಾಝ್ ಕಟ್ಟೆಕ್ಕಾರ್, ಉದಯ ಬಾಸ್ಕರ್ ಸುಳ್ಯ, ಸಿದ್ದೀಕ್ ಗೂನಡ್ಕ, ರವೂಫ್ ಪಾಲ್ತಾಡ್, ಕೆ.ಎಸ್ ಉಮರ್, ಶರೀಫ್ ಕಂಠಿ, ತಾಜುದ್ದೀನ್ ಟರ್ಲಿ, ರಹೀಂ ಫ್ಯಾನ್ಸಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಪದಾಧಿಕಾರಿಗಳು ಮತ್ತು ಕೆಎ 21 ವಾಟ್ಸಾಪ್ ಗ್ರೂಪ್ ಹಾಗೂ ಗಾಂಧಿ ರೋಯಲ್ ವಾಟ್ಸಾಪ್ ಗ್ರೂಪ್  ಇದರ ಸದಸ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News