×
Ad

​ಕಾಸರಗೋಡು : ಶೇಕಡಾ 62ರಷ್ಟು ಮತದಾನ

Update: 2021-04-06 16:03 IST

ಕಾಸರಗೋಡು : ಜಿಲ್ಲೆಯಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 3.30ರ ಸುಮಾರಿಗೆ ಶೇಕಡಾ 62ರಷ್ಟು ಮತದಾನವಾಗಿದೆ.

ತ್ರಿಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಅತ್ಯಧಿಕ 62ಶೇಕಡಾ ಮತದಾನವಾಗಿದ್ದು , ಮಂಜೇಶ್ವರದಲ್ಲಿ 61, ಕಾಸರಗೋಡು 56, ಉದುಮ 61, ಕಾಞಂಗಾಡ್ 60 ಶೇಕಡಾ ಮತದಾನವಾಗಿದೆ. 2016ರಲ್ಲಿ 76.33 ಶೇಕಡಾ ಮತದಾನವಾಗಿತ್ತು.

ಬೆಳಗ್ಗೆ ಗರಿಷ್ಟ ಪ್ರಮಾಣದ ಮತದಾನವಾಗಿತ್ತು . ಮಧ್ಯಾಹ್ನ ಪ್ರಮಾಣ ಇಳಿಕೆಯಾಗಿತ್ತು . ಇದೀಗ ಮೂರು ಗಂಟೆ ಬಳಿಕ ಮತದಾರ ಸರದಿ ಸಾಲು ಮತಗಟ್ಟೆಗಳಲ್ಲಿ ಕಂಡುಬರುತ್ತಿದೆ. ಸಂಜೆಯ ತನಕ ಮತದಾನ ನಡೆಯುತ್ತಿದೆ . ಪುರುಷ ಮತದಾರರಕ್ಕಿಂತ ಮಹಿಳೆಯರು ಹೆಚ್ಚು ಪ್ರಮಾಣದ ಮಾತದಾನ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News