×
Ad

ಅಶೋಕ್ ಕಾಮತ್‌ಗೆ ಡಾಕ್ಟರೇಟ್

Update: 2021-04-06 20:18 IST

ಉಡುಪಿ, ಎ. 6: ಉಡುಪಿ ಡಯಟ್‌ನ ಉಪಪ್ರಾಂಶುಪಾಲರಾದ ಅಶೋಕ್ ಕಾಮತ್ ಅವರು ಸಲ್ಲಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯ ಪಿಎಚ್‌ಡಿ ಪದವಿಯನ್ನು ನೀಡಿ ಗೌರವಿಸಿದೆ.

ಅಶೋಕ ಕಾಮತ್ ಅವರು ಡಾ.ನಿಕೇತನ ಇವರ ಮಾರ್ಗದರ್ಶನದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ್ದ ‘ಕನ್ನಡ ಆತ್ಮಕಥನಗಳಲ್ಲಿ ಶಾಲಾ ಶಿಕ್ಷಣದ ನೆಲೆಗಳು’ ವಿಷಯದ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಉಡುಪಿಯ ವಳಕಾಡು ಸರಕಾರಿ ಸಂಯುಕ್ತ ಪ್ರೌಢ ಶಾಲೆ ಹಾಗೂ ಬ್ರಹ್ಮಾವರದ ಸರಕಾರಿ ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಾಗಿ ಅವುಗಳ ಉನ್ನತಿಗೆ ಶ್ರಮಿಸಿ ಜನಮನ್ನಣೆ ಪಡೆದಿದ್ದ ಕಾಮತ್, ರಾಜ್ಯ ಶಿಕ್ಷಕ ವಿಶೇಷ ಪ್ರಶಸ್ತಿ ಪುರಸ್ಕೃತರು. ಇವರು ಕೆ.ನಾರಾಯಣ ಕಾಮತ್ ಮತ್ತು ರೋಹಿಣಿ ಕಾಮತ್ ದಂಪತಿಗಳ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News