ಕಾರ್ಕಳ ಪುರಸಭೆ: ಮಕ್ಕಳ ಸಮೀಕ್ಷೆ
Update: 2021-04-06 20:27 IST
ಉಡುಪಿ, ಎ.6: ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ 2020-21ನೇ ಸಾಲಿನಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಸರಕಾರದ ನಿರ್ದೇಶನದಂತೆ ಪುರಸಭೆ ವತಿಯಿಂದ ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ನಡೆಯಲಿದೆ.
ಸಮೀಕ್ಷೆ ಕಾರ್ಯವನ್ನು ಪುರಸಭಾ ಸಿಬ್ಬಂದಿಗಳು ಮತ್ತು ಪುರಸಭೆಯಿಂದ ಅಧಿಕೃತವಾಗಿ ನೇಮಿಸಿರುವ ಕಾರ್ಯಕರ್ತರು ಮನೆ-ಮನೆ ಭೇಟಿ ನೀಡಿ ಕೈಗೊಳ್ಳಲಾಗುತ್ತಿದೆ. ಮಾಹಿತಿ ಸಂಗ್ರಹಿಸುವಾಗ ಸಂಬಂದಪಟ್ಟ ಮನೆಯವರು ಅಧಿಕೃತ ಮಾಹಿತಿಯಾದ ಪಡಿತರ ಚೀಟಿ ಹಾಗೂ ಆಧಾರ್ ಕಾರ್ಡನ್ನು ನೀಡಿ ಶಾಲೆಯಿಂದ ಹೊರಗುಳಿದ ಮಕ್ಕಳ ಮನೆ-ಮನೆ ಸಮೀಕ್ಷೆಯನ್ನು ಯಶಸ್ವಿಗೊಳಿಸುವಂತೆ ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.