×
Ad

ಸಿಡಿಎಂ ಮಿಷನ್‌ನಲ್ಲಿ ನಕಲಿ ನೋಟು ಜವೆು: ದೂರು ದಾಖಲು

Update: 2021-04-06 20:35 IST

ಮಂಗಳೂರು, ಎ.6: ನಗರದ ಕಂಕನಾಡಿಯಲ್ಲಿರುವ ಫೆಡರೆಲ್ ಬ್ಯಾಂಕ್ ಶಾಖೆಯ ಸಿಡಿಎಂ ಮಿಶನ್‌ಗೆ ನಕಲಿ ನೋಟು ಜಮೆ ಮಾಡಿದ ಬಗ್ಗೆ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೂಡುಬಿದಿರೆ ಶಾಖೆಯಲ್ಲಿ ಖಾತೆ ಹೊಂದಿರುವ ಯವೇಶ್ ಎಂಬ ಹೆಸರಿನ ವ್ಯಕ್ತಿಯು ಫೆ.23ರಂದು ರಾತ್ರಿ 10:32ಕ್ಕೆ 31,500 ರೂ.ವನ್ನು ಜಮೆ ಮಾಡಿದ್ದ. ಪರಿಶೀಲನೆಯ ಸಂದರ್ಭ ಈತ ಜಮೆ ಮಾಡಿದ್ದ ನೋಟುಗಳ ಪೈಕಿ 2,000 ರೂ.ನ 15 ನೋಟುಗಳು ನಕಲಿ ಎಂದು ಕಂಡು ಬಂದಿದೆ.

ಈ ಬಗ್ಗೆ ಬ್ಯಾಂಕ್‌ನ ನೋಡಲ್ ಅಧಿಕಾರಿ ಪ್ರಮೋದ್ ಬಿ.ಪಾಟೀಲ್ ಎಂಬವರು ಕದ್ರಿ ಠಾಣೆಗೆ ದೂರು ನೀಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News