×
Ad

ಕಾಸರಗೋಡು ಜಿಲ್ಲೆಯಲ್ಲಿ ಶೇ 74.91 ಮತದಾನ

Update: 2021-04-06 21:32 IST

ಕಾಸರಗೋಡು : ವಿಧಾನಸಭೆ ಕ್ಷೇತ್ರ ಚುನಾವಣೆ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ರಾತ್ರಿ 8.30ರ ವೇಳೆಗೆ ಶೇ 74.91 ಮತದಾನ ನಡೆದಿದ್ದು, ಜಿಲ್ಲೆಯಲ್ಲಿ ಒಟ್ಟು 10,58,337 ಮಂದಿ ಮತದಾತರಿದ್ದು, 7,92,837 ಮಂದಿ ಮತದಾನ ನಡೆಸಿರುವ ಬಗ್ಗೆ ಆರಂಭಿಕ ಗಣನೆ ಮಾಡಲಾಗಿದೆ.

5 ವಿಧಾನಸಭೆಗಳಲ್ಲಿ ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ ದಾಖಲಿಸಲಾಗಿದೆ. ಇಲ್ಲಿ ಶೇ 76.81 ಮತ ಚಲಾವಣೆಯಾಗಿದೆ. ಕಾಸರಗೋಡು ಕ್ಷೇತ್ರದಲ್ಲಿ ಶೇ 70.81, ಉದುಮಾದಲ್ಲಿ ಶೇ 75.56, ಕಾಞಂಗಾಡು ಕ್ಷೇತ್ರದಲ್ಲಿ 74.35, ತ್ರಿಕರಿಪುರದಲ್ಲಿ ಶೇ 76.77 ಮತದಾನವಾಗಿರುವ ಅಂದಾಜಿದೆ.

ಜಿಲ್ಲೆಯ ಪುರುಷ ಮತದಾತರಲ್ಲಿ ಶೇ 73(377356) ಮಂದಿ ಮತದಾನ ನಡೆಸಿದರು. ಮಹಿಳೆಯರಲ್ಲಿಉ ಶೇ 76.73(415479) ಮಂದಿ ಮತಚಲಾಯಿಸಿದರು. ಒಟ್ಟು 6 ಮಂದಿ ತೃತೀಯ ಲಿಂಗಿಗಳಲ್ಲಿ ಇಬ್ಬರು ಮತದಾನ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News