ಇಸ್ರೇಲ್: ಸರಕಾರ ರಚಿಸಲು ನೆತನ್ಯಾಹುಗೆ ಆಹ್ವಾನ

Update: 2021-04-06 16:56 GMT

ಜೆರುಸಲೇಮ್, ಎ. 6: ಇಸ್ರೇಲ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲೂ ನಿರ್ಣಾಯಕ ಫಲಿತಾಂಶ ಹೊರಬೀಳದೆ ರಾಜಕೀಯ ಅಸ್ಥಿರತೆ ಮುಂದುವರಿದಿರುವ ನಡುವೆಯೇ, ನೂತನ ಸರಕಾರ ರಚಿಸುವಂತೆ ಅಧ್ಯಕ್ಷ ರ್ಯೂವೆನ್ ರಿವ್ಲಿನ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ ಮಂಗಳವಾರ ಆಹ್ವಾನ ನೀಡಿದ್ದಾರೆ.

2009ರ ಬಳಿಕ ನಿರಂತರವಾಗಿ ಅಧಿಕಾರದಲ್ಲಿರುವ ಬೆಂಜಮಿನ್ ಈಗ ಮೈತ್ರಿ ಸರಕಾರ ರಚಿಸುವುದಕ್ಕೆ ಅಗತ್ಯವಾದ ಮಿತ್ರ ಪಕ್ಷಗಳನ್ನು ಸಂಪಾದಿಸುವ ಕಠಿಣ ಸವಾಲನ್ನು ಎದುರಿಸುತ್ತಿದ್ದಾರೆ.

ಹೊಸ ಸರಕಾರ ರಚಿಸಲು ಅವರಿಗೆ 28 ದಿನಗಳ ಕಾಲಾವಕಾಶವಿದೆ. ಅದನ್ನು ಎರಡು ವಾರಗಳ ಕಾಲ ವಿಸ್ತರಿಸಬಹುದಾಗಿದೆ. ಅವರಿಗೆ ಸಾಧ್ಯವಾಗದಿದ್ದರೆ ಇನ್ನೋರ್ವ ಅಭ್ಯರ್ಥಿಯನ್ನು ಅಧ್ಯಕ್ಷರು ಸರಕಾರ ರಚನೆಗೆ ಆಹ್ವಾನಿಸಬಹುದಾಗಿದೆ.

ಮಾರ್ಚ್ 23ರಂದು ನಡೆದ ಚುನಾವಣೆಯಲ್ಲಿ ಯಾವ ಮೈತ್ರಿಕೂಟಕ್ಕೂ ಸರಳ ಬಹುಮತ ಸಿಕ್ಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News