ಅಗತ್ಯತೆಗಳೇ ಸಂಶೋಧನೆಗೆ ಪ್ರೇರಣೆ : ಗೌತಮ್ ನಾವಡ

Update: 2021-04-06 17:05 GMT

ಕಾರ್ಕಳ : ಮನುಷ್ಯನ ಅವಶ್ಯಕತೆಗಳೆ ಸಂಶೋಧನೆಗೆ ಪ್ರೇರಣೆ ಎಂದು ಫೋರ್ಥ್ ಫೋಕಸ್ ಗ್ರೂಪ್ ನ ಸಂಸ್ಥಾಪಕ ಗೌತಮ್ ನಾವಡ ಅಭಿಪ್ರಾಯಪಟ್ಟರು.

ಅವರು ಕಾರ್ಕಳ ಹಿರ್ಗಾನದ ಕ್ರಿಯೇಟಿವ್ ಪ.ಪೂ. ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿಗಳೊಂದಿಗೆ ಸಾಧಕರ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಂದು ವಿದ್ಯಾರ್ಥಿಗಳಲ್ಲೂ ಒಂದು ರೀತಿಯ ಪ್ರತಿಭೆಯಿರುವುದು. ಆ ಪ್ರತಿಭೆಯನ್ನು ಹೊರತರುವ ಕಾರ್ಯ ವಾಗಬೇಕೆಂದು ಅವರು ಹೇಳಿದರು.

ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕ್ರಿಯೇಟಿವ್ ಕಾಲೇಜಿನ ಸಂಸ್ಥಾಪಕ ಸದಸ್ಯರಲ್ಲೊಬ್ಬ ಅಶ್ವಥ್ ಎಸ್.ಎಲ್. ಸಾಧಕರನ್ನು ಪರಿಚಯಿಸಿದರು. ಡಾ. ಗಣನಾಥ ಶೆಟ್ಟಿ. ಆದರ್ಶ ಎಂ.ಕೆ., ಗಣಪತಿ ಭಟ್ ಕೆ.ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಂಚನಾ ಮತ್ತು ಬಳಗದವರು ಪ್ರಾರ್ಥಿಸಿದರು. ಹಿಂದಿ ಉಪನ್ಯಾಸಕ ವಿನಾಯಕ ಜೋಗ್ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News