ಉಪ್ಪಿನಂಗಡಿ: ಪಬ್ ‌ಜಿ ಆಟ; ಕೂದಲು ಕತ್ತರಿಸಿಕೊಂಡ ವಿದ್ಯಾರ್ಥಿ !

Update: 2021-04-06 17:55 GMT

ಉಪ್ಪಿನಂಗಡಿ, ಎ.6: ಉಳ್ಳಾಲದಲ್ಲಿ ಪಬ್ ‌ಜಿ ಆನ್‌ಲೈನ್ ಗೇಮ್‌ಗೆ ಅಮಾಯಕ ಬಾಲಕನೋರ್ವ ಬಲಿಯಾದ ಸುದ್ದಿ ಮಾಸುವ ಮುನ್ನವೇ ಉಪ್ಪಿನಂಗಡಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಯೋರ್ವ ಪಬ್‌ ಜಿ ಪ್ರೀ ಪೈಯರ್ ಗೇಮ್ ಆಡಿಕೊಂಡು ತಲೆ ಕೂದಲನ್ನು ಕತ್ತರಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.

ಇಲ್ಲಿನ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯೋರ್ವನ ತಲೆ ಕೂದಲನ್ನು ವಿಕಾರವಾಗಿ ಕತ್ತರಿಸಿಕೊಂಡಿರುವುದನ್ನು ಹೆತ್ತವರು ಗಮನಿಸಿ ಆತನನ್ನು ಪ್ರಶ್ನಿಸಿದ್ದಾರೆ. ಸುಳ್ಳು ಕತೆ ಕಟ್ಟಿ ಹೇಳುತ್ತಿರುವುದನ್ನು ಮನಗಂಡ ಹೆತ್ತವರು ಮತ್ತಷ್ಟು ವಿಚಾರಣೆಗೆ ಒಳಪಡಿಸಿದಾಗ ಕೊನೆಗೆ ಆತ ಸತ್ಯ ಬಾಯ್ಬಿಟ್ಟಿದ್ದಾನೆ. ತಾನು ಪಬ್‌ ಜಿ ಆಟವಾಡುತ್ತಾ ಫ್ರೀ ಪೈಯರ್ ಆನ್‌ಲೈನ್ ಆಟದಡಿ ಮೊಬೈಲ್ ಮುಂಭಾಗದಲ್ಲಿ ತಲೆ ಕೂದಲು ಕತ್ತರಿಸಿಕೊಂಡಿರುವುದಾಗಿ ತಿಳಿಸಿದ್ದಾನೆ.

ವಿದ್ಯಾರ್ಥಿಯ ಈ ಕೃತ್ಯಕ್ಕೆ ಕಂಗೆಟ್ಟ ಪೋಷಕರು ಈ ಪ್ರಕರಣವನ್ನು ಪೊಲೀಸರ ಗಮನಕ್ಕೆ ತಂದಾಗ, ಈ ಗೇಮ್ ಹಿಂದೆ ಇನ್ನಷ್ಟು ಮಕ್ಕಳು ಭಾಗಿಯಾಗಿರುವುದು ಕಂಡುಬಂದಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಈ ಆಟದಲ್ಲಿ ಭಾಗಿಯಾಗಿರುವ ಎಲ್ಲಾ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News