ಕುಲಪತಿ ಹುದ್ದೆಗೆ ಲಂಚ ಪ್ರಕರಣ: ರಾಮಸೇನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರ್‌ಗೆ ಜಾಮೀನು

Update: 2021-04-06 18:00 GMT

ಮಂಗಳೂರು, ಎ.6: ರಾಯಚೂರು ವಿವಿಯಲ್ಲಿ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿ ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ.ಎಂ.ಜೈಶಂಕರ್ ಎಂಬವ‌ರಿಂದ 17:50 ಲಕ್ಷ ರೂ.ಲಂಚ ಪಡೆದುಕೊಂಡು ಕುಲಪತಿ ಹುದ್ದೆಯನ್ನು ಕೊಡಿಸದೆ ಹಣವನ್ನೂ ಮರಳಿಸದೆ ವಂಚಿಸಿ ಜೈಲು ಪಾಲಾಗಿದ್ದ ರಾಮಸೇನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರ್‌ಗೆ ಜಾಮೀನು ಸಿಕ್ಕಿದೆ.

ನನ್ನನ್ನು ವಿನಾ ಕಾರಣ ರಾಜಕೀಯ ದ್ವೇಷದಿಂದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಒಬ್ಬ ಸರಕಾರಿ ಪ್ರಾಧ್ಯಾಪಕ ಕುಲಪತಿ ಹುದ್ದೆಗೆ ಲಂಚ ಕೊಡುವುದೆಂದರೆ ಅವರು ಕೂಡಾ ಅಪರಾಧ ಎಸಗಿದಂತೆ ಆಗಿದ್ದು, ನನ್ನ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಪ್ರಸಾದ್ ಅತ್ತಾವರ ತನ್ನ ವಕೀಲರಾದ ಮಯೂರ ಕೀರ್ತಿ ಮತ್ತು ಅಸೋಸಿಯೇಟ್ಸ್ ಮೂಲಕ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದ.

ವಾದ ಪ್ರತಿವಾದಗಳನ್ನು ಆಲಿಸಿದ ಮಂಗಳೂರಿನ 7ನೇ ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶೆ ಪದ್ಮಾ ಎಂ. ಅವರು ಪ್ರಸಾದ್ ಅತ್ತಾವರಗೆ ಜಾಮೀನು ಮಂಜೂರು ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News