ಉಡುಪಿ: 7255 ಮಂದಿಗೆ ಕೊರೋನ ಲಸಿಕೆ

Update: 2021-04-07 13:34 GMT

ಉಡುಪಿ, ಎ.7: ಕೊರೋನ ವಿರುದ್ಧದ ಹೋರಾಟದಲ್ಲಿ ಪ್ರಮುಖ ಆಶಾಕಿರಣವಾಗಿರುವ ಕೋವಿಡ್ ಲಸಿಕೆಯನ್ನು ಬುಧವಾರ ಒಟ್ಟು 7255 ಮಂದಿ ಸ್ವೀಕರಿಸಿದರು. ಇವರಲ್ಲಿ 6842 ಮಂದಿ ಲಸಿಕೆಯ ಮೊದಲ ಡೋಸ್ ಪಡೆದರೆ, 413 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಜಿಲ್ಲೆಯಲ್ಲಿ 45 ವರ್ಷ ಮೇಲಿನ ಒಟ್ಟು 7182 ಮಂದಿ ಲಸಿಕೆಯನ್ನು ಸ್ವೀಕರಿ ಸಿದ್ದು, ಇವರಲ್ಲಿ 6841 ಮಂದಿ ಮೊದಲ ಡೋಸ್‌ನ್ನೂ, 341 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 58 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 15 ಮಂದಿ ಕೊರೋನ ಮುಂಚೂಣಿ ಯೋಧರು ಇಂದು ಲಸಿಕೆಯನ್ನು ಸ್ವೀಕರಿಸಿದ್ದಾರೆ ಎಂದವರು ಹೇಳಿದರು.

ಜಿಲ್ಲೆಯಲ್ಲಿ ಇದುವರೆಗೆ ಲಸಿಕೆಯ ಮೊದಲ ಡೋಸ್‌ನ್ನು ಪಡೆದವರ ಒಟ್ಟು ಸಂಖ್ಯೆ 1,22,016ಕ್ಕೇರಿದರೆ, 20,489 ಮಂದಿ ಎರಡನೇ ಡೋಸ್‌ನ್ನು ಸ್ವೀಕರಿಸಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News