ಕೋಟ : ಬಸ್ ಢಿಕ್ಕಿ; ಪಾದಚಾರಿ ಮೃತ್ಯು

Update: 2021-04-07 15:22 GMT

ಕೋಟ :  ರಾಷ್ಟ್ರೀಯ ಹೆದ್ದಾರಿ66ರ ಸಾಲಿಗ್ರಾಮದ ನರ್ತಕಿ ಬಾರ್ ಎದುರುಗಡೆ ರಸ್ತೆ ದಾಟುತ್ತಿದ್ದ ಪಾದಚಾರಿಯೋರ್ವರಿಗೆ ವಿಆರ್ ಎಲ್ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬುಧವಾರ ರಾತ್ರಿ 8ಗಂಟೆಯ ಸುಮಾರಿಗೆ ನಡೆದಿದೆ.

ಮೃತನು ಕೊಪ್ಪದ ಭೀಮಣ್ಣ ಎಂದು ಗುರುತಿಸಲಾಗಿದೆ.

ಇವರು ಕೂಲಿ ಕೆಲಸ ಮಾಡಿಕೊಂಡಿದ್ದು ಕೋಟದ ಮೂರುಕೈ ಯಲ್ಲಿ ಬಾಡಿಗೆ ಮನೆಯಲ್ಲಿ ಇದ್ದರು. ಮೃತರು ಪತ್ನಿ ಹಾಗೂ 2  ಮಕ್ಕಳನ್ನು ಅಗಲಿದ್ದಾರೆ. ಕೋಟ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News