ಗಾಂಜಾ ಸೇವನೆ ಆರೋಪ: ಯುವಕನ ಸೆರೆ
Update: 2021-04-07 21:40 IST
ಮಂಗಳೂರು, ಎ.7: ಕಾಟಿಪಳ್ಳ 6ನೆ ಬ್ಲಾಕ್ ಬಳಿ ಗಾಂಜಾ ಸೇವಿಸಿ ಠಳಾಯಿಸುತ್ತಿದ್ದ ಆರೋಪಿ ಹಸನ್ ಶಾಹೀಕ್ ಎಂಬಾತನನ್ನು ಸುರತ್ಕಲ್ ಠಾಣೆಯ ಎಸ್ಸೈ ಪುನೀತ್ ಎಂ. ಗಾಂವ್ಕರ್ ಮಂಗಳವಾರ ರಾತ್ರಿ 9:30ರ ವೇಳೆಗೆ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ಆರೋಪಿಯು ಗಾಂಜಾ ಸೇವನೆ ಮಾಡಿದ ಬಗ್ಗೆ ಅನುಮಾನಗೊಂಡ ಪೊಲೀಸರು ಆಸ್ಪತ್ರೆಗೆ ಕಳುಹಿಸಿಕೊಟ್ಟು ತಪಾಸಣೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.