ನರೇಗಾ ಕೂಲಿ ದರ ಹೆಚ್ಚಳ ಮಾಡಲಾಗಿದೆ : ಸಚಿವ ಈಶ್ವರಪ್ಪ

Update: 2021-04-07 16:17 GMT

ಮಂಗಳೂರು, ಎ.7: ನರೇಗಾ ಕೂಲಿ ದರವನ್ನು ಎಪ್ರಿಲ್ ಒಂದರಿಂದ ರೂ. 275 ರಿಂದ  289 ರೂ. ಹಾಗೂ ಸಲಕರಣೆಗಳ ಬಾಡಿಗೆ ರೂ.10 ಸೇರಿ 29ರೂ. ಗಳಿಗೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ನರೇಗಾ ಯೋಜನೆಯಲ್ಲಿ ಗುರಿ ಮೀರಿದ ಸಾಧನೆಯಾಗಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದು ಮಾಡುವ ತೀರ್ಮಾನ ರಾಜ್ಯ ಸರಕಾರ ತೆಗೆದುಕೊಂಡಿಲ್ಲ.ಈ ಬಾರಿ ತಾಲೂಕು ಪಂಚಾಯತ್ ಗಳಿಗೂ ಚುನಾವಣೆ ನಡೆಯಲಿದೆ. ಆದರೆ ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದು ಪಡಿಸಬೇಕೆಂಬ ಆಗ್ರಹ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಯನ್ನು ಸಲ್ಲಿಸಲಾಗುವುದು. ತಾಲೂಕು ಪಂಚಾಯತ್ ವ್ಯವಸ್ಥೆ ರದ್ದು ಮಾಡುವ ಬಗ್ಗೆ ರಾಜ್ಯ ಸರಕಾರ ತೀರ್ಮಾನ ತೆಗೆದುಕೊಳ್ಳಲು ಕಾನೂನಿನ  ತೊಡಕಿದೆ ಎಂದು ಈಶ್ವರ ಪ್ಪ ತಿಳಿಸಿದ್ದಾರೆ.

ಕೆ.ಎಸ್.ಆರ್.ಟಿ.ಸಿ. ನೌಕರರ ಪ್ರತಿಭಟನೆಯ ನಾಯಕತ್ವ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ನೌಕರರ ಮುಷ್ಕರದಿಂದ ರಾಜ್ಯದ ಜನತೆಗೆ ತೊಂದರೆ ಯಾದರೆ ಸರಕಾರ ಸುಮ್ಮನಿರಲು ಸಾಧ್ಯವಿಲ್ಲ. ಸೂಕ್ತ ಕ್ರಮ ಕೈ ಗೊಳ್ಳಲಿದೆ. ಆದರೆ ಏಕಾಏಕಿ ಸರಕಾರ ಈ ರೀತಿಯ ಕಠಿಣ ನಿರ್ಧಾ ರ ತೆಗೆದುಕೊಳ್ಳುವುದಿಲ್ಲ. ಈ ಬಗ್ಗೆ ಮೊದಲು ನೌಕರರಿಗೆ, ಜನರಿಗೆ ಮನವರಿಕೆಯಾಗಬೇಕಾಗಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಎಲ್ಲಾ ಜಿಲ್ಲೆಯಲ್ಲಿಯೂ ಜಲ ಶಕ್ತಿ ಅಭಿಯಾನ ಆರಂಭವಾಗಲಿದೆ. ಮಾರ್ಚ್ 22ರಂದು ರಾಜ್ಯದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಈ ಯೋಜನೆಯ ಮೂಲಕ ಮಳೆ ನೀರಿಂಗಿಸುವುದು. ಜಲಮರುಪೂರಣ ಸೇರಿದಂತೆ ಜಲ ಸಂವರ್ಧನೆಯ ಕಾರ್ಯಕ್ರಮ ನಡೆಯಲಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಅಂಗಾರ, ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿ, ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News