ಎ. 9: ಯುಎಇ ಕನ್ನಡ ಮಕ್ಕಳ ಕಲಾವೇದಿಕೆ ಕಾರ್ಯಕ್ರಮ

Update: 2021-04-07 16:37 GMT

ಅಬುಧಾಬಿ : ದುಬೈಯ ಹೆಮ್ಮೆಯ ಯುಎಇ ಕನ್ನಡಿಗರು ಸಂಘದ ಮಹಿಳಾ ಘಟಕವಾದ ಹೆಮ್ಮೆಯ ಯುಎಇ ಕನ್ನಡತಿಯರು ತಂಡದ ವತಿಯಿಂದ ಯುಗಾದಿ ಹಬ್ಬದ ಪ್ರಯುಕ್ತ  ಸಂಯುಕ್ತ ಅರಬ್ ಸಂಸ್ಥಾನದಲ್ಲಿ ನೆಲಸಿರುವ ಕನ್ನಡ ಮಕ್ಕಳಿಗಾಗಿ ವಿವಿಧ ರೀತಿಯ ಕಲಾತ್ಮಕ ಪ್ರತಿಭಾ ಸ್ಪರ್ಧೆಯನ್ನು ಎ. 9ರಂದು ಸಂಜೆ 4ರಿಂದ ಝೂಮ್ ನಲ್ಲಿ ಏರ್ಪಡಿಸಲಾಗಿದೆ.

ಈ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ಗಾಯನ ಸ್ಪರ್ಧೆ, ನೃತ್ಯ ಸ್ಪರ್ಧೆ, ಫ್ಯಾನ್ಸಿ ಡ್ರೆಸ್, ವಾದ್ಯ ಸಂಗೀತ, ಡ್ರಾಯಿಂಗ್ ಮತ್ತು ಕಲರಿಂಗ್ ಸ್ಪರ್ಧೆ ಮುಂತಾದ ಸ್ಪರ್ಧೆಗಳು ನಡೆಯಲಿವೆ ಎಂದು ಸಂಘಟಕರು ತಿಳಿಸಿದ್ದಾರೆ. ನೋಂದಣಿ ಮಾಡಲು www.dubaikannadigaru.com/events/kids-talent-competition ವೆಬ್ಸೈಟ್ ಸಂದಶಿಸಬೇಕಾಗಿ ಆಯೋಜಕರು ತಿಳಿಸಿದ್ದಾರೆ.

ಕಾರ್ಯಕ್ರಮದ ಪ್ರಯುಕ್ತ ಕರೆದ ವಾರ್ತಾ ಹೇಳಿಕೆಯಲ್ಲಿ ಪ್ರತಿಭಾ ಸ್ಪರ್ಧೆ ಮುಖ್ಯ ಸಂಘಟಕರು ಮತ್ತು ಹೆಮ್ಮೆಯ ಕನ್ನಡತಿಯರು ವಿಭಾಗದ ಮುಖ್ಯ ಸಂಚಾಲಕಿಯರಾದ ಮಮತಾ ಶಾರ್ಜಾ, ಪಲ್ಲವಿ ದಾವಣಗೆರೆ ಮತ್ತು ಹಾದಿಯ ಮಂಡ್ಯ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು.

ಈ ಸಮಯದಲ್ಲಿ ಹೆಮ್ಮೆಯ ಕನ್ನಡಿಗರು ಸಂಘದ ಅಧ್ಯಕ್ಷರಾದ ಮಮತಾ ಮೈಸೂರು, ಮುಖ್ಯ ಕಾರ್ಯದರ್ಶಿ ಸೆಂತಿಲ್ ಬೆಂಗಳೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು, ಸುದೀಪ್ ದಾವಣಗೆರೆ, ಡಾಕ್ಟರ್ ಸವಿತಾ ಮೈಸೂರು, ವಿಷ್ಣುಮೂರ್ತಿ ಮೈಸೂರು , ಶಂಕರ್ ಬೆಳಗಾವಿ, ಮೊಯಿನುದ್ದೀನ್ ಹುಬ್ಬಳ್ಳಿ , ಅನಿತಾ ಬೆಂಗಳೂರು ಮತ್ತು ಉಪಸಮಿತಿ ಸದಸ್ಯರುಗಳು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News