ರಕ್ತ ಹೆಪ್ಪುಗಟ್ಟುವುದು ‘ಅತ್ಯಂತ ಅಪರೂಪದ ಅಡ್ಡ ಪರಿಣಾಮ’: ಯುರೋಪಿಯನ್ ಮೆಡಿಸಿನ್ಸ್ ಏಜನ್ಸಿ

Update: 2021-04-07 18:00 GMT

ದ ಹೇಗ್ (ನೆದರ್‌ಲ್ಯಾಂಡ್ಸ್), ಎ. 7: ರಕ್ತಹೆಪ್ಪುಗಟ್ಟುವುದನ್ನು ಆ್ಯಸ್ಟ್ರಝೆನೆಕ ಕೊರೋನ ವೈರಸ್ ಲಸಿಕೆಯ ‘ಅತ್ಯಂತ ಅಪರೂಪದ’ ಅಡ್ಡ ಪರಿಣಾಮ ಎಂಬುದಾಗಿ ಪರಿಗಣಿಸಬೇಕು ಎಂದು ಯುರೋಪಿಯನ್ ಮೆಡಿಸಿನ್ಸ್ ಏಜನ್ಸಿ ಬುಧವಾರ ಹೇಳಿದೆ. ಆದರೆ, ಈ ಲಸಿಕೆಯ ಪ್ರಯೋಜನಗಳು ಅದು ಒಡ್ಡುವ ಅಪಾಯಕ್ಕಿಂತ ತುಂಬಾ ಹೆಚ್ಚಾಗಿವೆ ಎಂದು ಅದು ಅಭಿಪ್ರಾಯಪಟ್ಟಿದೆ.

‘‘ರಕ್ತದಲ್ಲಿ ಕಡಿಮೆ ಪ್ಲೇಟ್‌ಲೆಟ್‌ಗಳ ಪರಿಣಾಮವಾಗಿ ರಕ್ತ ಹೆಪ್ಪುಗಟ್ಟುವುದನ್ನು ಆ್ಯಸ್ಟ್ರಝೆನೆಕದ ಅತ್ಯಂತ ಅಪರೂಪದ ಅಡ್ಡ ಪರಿಣಾಮಗಳು ಎಂಬುದಾಗಿ ಪರಿಗಣಿಸಬೇಕು ಎಂಬುದಾಗಿ ಏಜನ್ಸಿಯ ಸುರಕ್ಷತಾ ಸಮಿತಿ ಬುಧವಾರ ತೀರ್ಮಾನಿಸಿದೆ’’ ಎಂದು ನೆದರ್‌ಲ್ಯಾಂಡ್ಸ್ ರಾಜಧಾನಿ ಆ್ಯಮ್‌ಸ್ಟರ್‌ಡಾಮ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಐರೋಪ್ಯ ಒಕ್ಕೂಟದ ಔಷಧ ನಿಯಂತ್ರಣ ಪ್ರಾಧಿಕಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News