ನವಾಲ್ನಿಯನ್ನು ರಶ್ಯ ನಿಧಾನವಾಗಿ ಕೊಲ್ಲುತ್ತಿರಬಹುದು: ಆ್ಯಮ್ನೆಸ್ಟಿ

Update: 2021-04-07 18:02 GMT

ವಾಶಿಂಗ್ಟನ್, ಎ. 7: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರ ಎದುರಾಳಿ ಹಾಗೂ ಪ್ರತಿಪಕ್ಷ ನಾಯಕ ಅಲೆಕ್ಸಿ ನವಾಲ್ನಿಯನ್ನು ಇಟ್ಟಿರುವ ಸೆರೆಮನೆಯ ಸ್ಥಿತಿಗತಿಯನ್ನು ಅಂತರ್‌ರಾಷ್ಟ್ರೀಯ ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ಖಂಡಿಸಿದೆ. ಜೈಲಿನಲ್ಲಿರುವ ಪರಿಸ್ಥಿತಿಯು ಚಿತ್ರಹಿಂಸೆಗೆ ಸಮಾನವಾಗಿದೆ ಹಾಗೂ ಅದು ನಿಧಾನವಾಗಿ ನವಾಲ್ನಿಯನ್ನು ಕೊಲ್ಲುತ್ತಿರಬಹುದು ಎಂದು ಅದು ಬುಧವಾರ ಹೇಳಿದೆ.

ನವಾಲ್ನಿಯನ್ನು ಕಳೆದ ವರ್ಷ ಸೈನ್ಯದಲ್ಲಿ ಬಳಸಲಾಗುವ ನರ್ವ್ ಏಜಂಟ್ ಪ್ರಯೋಗಿಸಿ ಕೊಲ್ಲಲು ಯತ್ನಿಸಲಾಗಿತ್ತು ಹಾಗೂ ಈಗ ಅವರನ್ನು ನಿದ್ರಾಹೀನತೆಗೆ ಗುರಿಪಡಿಸಲಾಗುತ್ತಿದೆ ಎಂದು ಮಾನವಹಕ್ಕುಗಳ ಸಂಘಟನೆ ಹೇಳಿದೆ. ಜೈಲಿನಲ್ಲಿ ವಿಶ್ವಾಸಾರ್ಹ ವೈದ್ಯರ ಸೇವೆ ಪಡೆಯಲು ಅವರಿಗೆ ಅವಕಾಶ ನೀಡಲಾಗುತ್ತಿಲ್ಲ ಎಂದಿದೆ.

‘‘ರಶ್ಯದ ಅಧಿಕಾರಿಗಳು ಅವರನ್ನು ನಿಧಾನ ಸಾವಿಗೆ ಗುರಿಪಡಿಸುತ್ತಿರಬಹುದು ಹಾಗೂ ಅವರಿಗೆ ಏನಾಗುತ್ತಿದೆ ಎನ್ನುವುದನ್ನು ಮುಚ್ಚಿಡಲು ಯತ್ನಿಸುತ್ತಿರಬಹುದು’’ ಎಂದು ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಹಾ ಕಾರ್ಯದರ್ಶಿ ಆ್ಯಗ್ನೆಸ್ ಕ್ಯಾಲಮಾರ್ಡ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News