ತಮಿಳುನಾಡು: ಶನಿವಾರದಿಂದ ಕಠಿಣ ಕೋವಿಡ್ ನಿರ್ಬಂಧಗಳು ಜಾರಿ

Update: 2021-04-08 09:29 GMT

 ಚೆನ್ನೈ: ಕೋವಿಡ್ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರ ಎಪ್ರಿಲ್ 10ರಿಂದ ಜಾರಿಯಾಗಲಿರುವ ಕಠಿಣ ನಿರ್ಬಂಧಗಳನ್ನು ಇಂದು ಘೋಷಿಸಿದೆ.

ಸರಕಾರದ ಹೊಸ ಮಾರ್ಗಸೂಚಿಯಂತೆ  ಶನಿವಾರದಿಂದ ರಾಜ್ಯದಲ್ಲಿ ಜಾರಿಯಾಗಲಿರುವ ನಿರ್ಬಂಧಗಳು ಹೀಗಿವೆ.

* ಎಲ್ಲಾ ಹಬ್ಬಗಳ ಸಾರ್ವಜನಿಕ ಆಚರಣೆ ಮತ್ತು ಧಾರ್ಮಿಕ ಸಭೆಗಳನ್ನು ನಿಷೇಧಿಸಲಾಗಿದೆ.

* ಕೊಯಂಬೀಡು ಮಾರ್ಕೆಟ್ ಕಾಂಪ್ಲೆಕ್ಸ್‍ನಲ್ಲಿ ರಿಟೇಲ್ ಹಣ್ಣು, ತರಕಾರಿ ಮಳಿಗೆಗಳು ಕಾರ್ಯಾಚರಿಸುವಂತಿಲ್ಲ.

* ಚೆನ್ನೈ ಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಕರಿಗೆ ನಿಂತುಕೊಂಡು ಹೋಗಲು ಅನುಮತಿಯಿಲ್ಲ

* ಶಾಪಿಂಗ್ ಮಾಲ್‍ಗಳು, ಶೋರೂಂಗಳು, ಚಿನ್ನಾಭರಣ, ಜವಳಿ ಶೋರೂಂಗಳು, ರಿಕ್ರಿಯೇಷನ್ ಕ್ಲಬ್‍ಗಳು, ಮನರಂಜನಾ ಮತ್ತು ಅಮ್ಯೂಸ್ಮೆಂಟ್ ಪಾರ್ಕ್‍ಗಳು, ಸಿನೆಮಾ ಥಿಯೇಟರ್‍ಗಳು, ಮಲ್ಟಿಪ್ಲೆಕ್ಸ್ ಗಳು, ಹೋಟೆಲ್‍ಗಳು ತಮ್ಮ ಸಾಮರ್ಥ್ಯದ ಒಟ್ಟು ಶೇ50ರಷ್ಟು ಗ್ರಾಹಕರಿಗೆ ಮಾತ್ರ ಅವಕಾಶ ನೀಡಬಹುದು.

* ಮದುವೆ, ಅಂತ್ಯಕ್ರಿಯೆಗಳಿಗೆ 100 ಜನರಿಗೆ ಮಾತ್ರ ಅವಕಾಶ.

* ಪ್ರೇಕ್ಷಕರಿಲ್ಲದೆ ಕ್ರೀಡಾಂಗಣದಲ್ಲಿ ಪಂದ್ಯಾಟಗಳಿಗೆ ಅವಕಾಶ

*ಈಜುಕೊಳಗಳಲ್ಲಿ ಕೇವಲ ತರಬೇತಿಗೆ ಮಾತ್ರ ಅವಕಾಶ

* ಆರಾಧನಾಲಯಗಳು ಭಕ್ತರಿಗೆ ರಾತ್ರಿ 8 ಗಂಟೆ ತನಕ ತೆರೆದಿರಲಿದೆ ಆದರೆ ಯಾವುದೇ ಸಾರ್ವಜನಿಕ ಆಚರಣೆಗೆ ಅವಕಾಶವಿಲ್ಲ.

* ಟಿವಿ ಧಾರಾವಾಹಿಗಳು ಹಾಗೂ ಚಲನಚಿತ್ರ ಚಿತ್ರೀಕರಣಕ್ಕೆ ಅವಕಾಶ

* ಆಟೋರಿಕ್ಷಾಗಳಲ್ಲಿ ಇಬ್ಬರು ಪ್ರಯಾಣಿಕರು ಮಾತ್ರ ಪ್ರಯಾಣಿಸಬಹುದು

* ಇತರ ರಾಜ್ಯಗಳಿಂದ ಆಗಮಿಸುವವರಿಗೆ ಇ-ಪಾಸ್ ವ್ಯವಸ್ಥೆ ಮುಂದುವರಿಯಲಿದೆ.

ಬುಧವಾರ ರಾಜ್ಯದಲ್ಲಿ 3986 ಪ್ರಕರಣಗಳು ವರದಿಯಾಗಿದ್ದರೆ ಚೆನ್ನೈ ನಗರವೊಂದರಲ್ಲಿಯೇ 1459 ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News