×
Ad

ನಿಡಂಬೂರು ಶ್ರೀ ಪ್ರಶಸ್ತಿಗೆ ವಸಂತಿ ರಾಮಭಟ್ ಆಯ್ಕೆ

Update: 2021-04-08 19:05 IST

ಉಡುಪಿ, ಎ.8: ಈ ಬಾರಿಯ ‘ನಿಡಂಬೂರು ಶ್ರೀ’ ಪ್ರಶಸ್ತಿಗೆ ಹಿರಿಯ ವಯಲಿನ್ ವಾದಕಿ ಕಿದಿಯೂರು ವಸಂತಿ ರಾಮಭಟ್ ಆಯ್ಕೆಯಾಗಿದ್ದಾರೆ.

ನಿಡಂಬೂರು ಮಾಗಣೆಯ ಹಿರಿಯ ಸಾಧಕರಿಗೆ ನೀಡಲ್ಪಡುವ ಈ ಪ್ರಶಸ್ತಿಯನ್ನು ಡಾ. ನಿಡಂಬೂರು ಬೀಡು ವಿಜಯ ಬಲ್ಲಾಳರು ಸ್ಥಾಪಿಸಿದ್ದು ಪ್ರಶಸ್ತಿ ಪ್ರದಾನ ಇದೇ ತಿಂಗಳ ಎ.11ರ ರವಿವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಇಡೀ ದಿನದ ಮಧೂರ ಮಾಧುರ್ಯ ಕಾರ್ಯಕ್ರಮದ ವೇಳೆ ನಡೆಯಲಿದೆ.

ಅಂದು ಅಪರಾಹ್ನ 3 ಗಂಟೆಗೆ ವಸಂತಿ ರಾಮಭಟ್ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಡಾ. ನಿ. ಬೀ. ವಿಜಯ ಬಲ್ಲಾಳ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News