ಎ. 12ರಿಂದ ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ನಡುವೆ ವಿಶೇಷ ರೈಲು ಸಂಚಾರ

Update: 2021-04-08 16:36 GMT
ಸಾಂದರ್ಭಿಕ ಚಿತ್ರ

ಉಡುಪಿ, ಎ.8: ಮಡಗಾಂವ್ ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್ ನಡುವೆ ಸಂಪೂರ್ಣವಾಗಿ ಕಾದಿರಿಸಿದ ವಿಶೇಷ ಎಕ್ಸ್‌ಪ್ರೆಸ್ ರೈಲು ಕೊಂಕಣ ರೈಲು ಮಾರ್ಗದಲ್ಲಿ ಸಂಚರಿಸಲಿದೆ.

ಸಾಮಾನ್ಯ ವೇಳಾ ಪಟ್ಟಿ: ರೈಲು ನಂ.07107 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ದೈನಂದಿನ ವಿಶೇಷ ರೈಲು ಎ. 12ರಿಂದ ಜೂನ್9ರವರೆಗೆ ರವಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಮುಂಜಾನೆ 5:10ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಹೊರಡಲಿದ್ದು, ಅದೇ ದಿನ ಅಪರಾಹ್ನ 12:15ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.

ರೈಲು ನಂ.07108 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ದೈನಂದಿನ ರೈಲು ಮುಂದಿನ ಎ.12ರಿಂದ ಜೂ.9ರವರೆಗೆ ರವಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಅಪರಾಹ್ನ 2:45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡಲಿದ್ದು, ಅದೇ ದಿನ ರಾತ್ರಿ 10:10ಕ್ಕೆ ಮಡಗಾಂವ್ ತಲುಪಲಿದೆ.

ಮಳೆಗಾಲದ ವೇಳಾಪಟ್ಟಿ: ರೈಲು ನಂ.07107 ಮಡಗಾಂವ್ ಜಂಕ್ಷನ್-ಮಂಗಳೂರು ಸೆಂಟ್ರಲ್ ದೈನಂದಿನ ವಿಶೇಷ ರೈಲು ಮಳೆಗಾಲದಲ್ಲಿ ಜೂ.10ರಿಂದ ಜೂ.30ರವರೆಗೆ ರವಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಮುಂಜಾನೆ 5:10ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ಹೊರಡ ಲಿದ್ದು, ಅದೇ ದಿನ ಅಪರಾಹ್ನ 12:30ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ತಲುಪಲಿದೆ.

ರೈಲು ನಂ.07108 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ದೈನಂದಿನ ರೈಲು ಮುಂದಿನ ಜೂ.10ರಿಂದ ಜೂ.30ರವರೆಗೆ ರವಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಅಪರಾಹ್ನ 2:45ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡಲಿದ್ದು, ಅದೇ ದಿನ ರಾತ್ರಿ 10:10ಕ್ಕೆ ಮಡಗಾಂವ್ ತಲುಪಲಿದೆ.

ಈ ರೈಲಿಗೆ ಕಾಣಕೋಣ, ಅಸ್ನೋಟಿ, ಕಾರವಾರ, ಅಂಕೋಲ, ಗೋಕರ್ಣ ರೋಡ್, ಕುಮಟ, ಮಂಕಿ, ಮುರ್ಡೇಶ್ವರ, ಭಟ್ಕಲ, ಮೂಕಾಂಬಿಕಾ ರೋಡ್ ಬೈಂದೂರು, ಸೇನಾಪುರ, ಕುಂದಾಪುರ, ಬಾರಕೂರು, ಉಡುಪಿ, ಮುಲ್ಕಿ, ಸುರತ್ಕಲ್ ಹಾಗೂ ಮಂಗಳೂರು ಜಂಕ್ಷನ್‌ಗಳಲ್ಲಿ ನಿಲುಗಡೆ ಇರುತ್ತದೆ.

ಈ ರೈಲು ಎಂಟು ಸೆಕೆಂಡ್ ಸೀಟಿಂಗ್ ಕೋಚ್‌ಗಳನ್ನು ಹೊಂದಿರುತ್ತದೆ. ಪ್ರಯಾಣಿಕರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎಲ್ಲಾ ಕೋವಿಡ್-19 ಮಾರ್ಗಸೂಚಿಗಳನ್ನು ರೈಲು ಮತ್ತು ರೈಲು ನಿಲ್ದಾಣಗಳಲ್ಲಿ ತಪ್ಪದೇ ಪಾಲಿಸಬೇಕು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News