ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ಮುಳುಗುತ್ತಿರುವ ಹಡಗು ಎಂದ ಸಚಿವ ಆರ್. ಅಶೋಕ್

Update: 2021-04-09 13:18 GMT

ಬೆಳ್ತಂಗಡಿ: ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ಮುಳುಗುತ್ತಿರುವ ಹಡಗು. ನಷ್ಟದಲ್ಲಿದೆ, ಸರಕಾರಕ್ಕೆ ಒಂದು ರೀತಿ ಹೊರೆಯಾಗಿದೆ. ಈಗ ನೌಕರರು ನಡೆಸುತ್ತಿರುವ ಮುಷ್ಕರ ಈ ಸಂಸ್ಥೆಗಳನ್ನು ಮುಗಿಸಿ ಹಾಕಿದರೆ ಅದಕ್ಕೆ ಅವರೇ ಹೊಣೆಗಾರರಾಗಿರುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. 

ಬೆಳ್ತಂಗಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, "ಕೊರೋನ ಕಾಲದಲ್ಲಿ ಎಲ್ಲರೂ ಸಮಸ್ಯೆಯಲ್ಲಿದ್ದಾರೆ. ಎಲ್ಲರಿಗೂ ವೇತನ ನೀಡುವುದೇ ಕಷ್ಟವಾಗಿರುವಾಗ ಅಸಾಧ್ಯವಾದ ಬೇಡಿಕೆಗಳನ್ನು ಮುಂದಿಟ್ಟು ಇಂತಹ ಹೋರಾಟ ನಡೆಸುವುದು ಸರಿಯಲ್ಲ ಎಂದ ಸಚಿವರು, ಸರಕಾರ ಸಮಸ್ಯೆಗೆ ಪರಿಹಾರ ಕಾಣಲು ಎಲ್ಲ ರೀತಿಯ ಪ್ರಯತ್ನಗಳನ್ನು ನಡೆಸುತ್ತಿದೆ. ನೌಕರರು ಮರಳಿ ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಕೊರೋನದಿಂದ ಅಗುವ ಎಲ್ಲ ಸಮಸ್ಯೆಗಳನ್ನು ಎದುರಿಸಲು ಸರಕಾರ ಸಿದ್ದವಾಗಿದೆ. ಈಗ ಹಾಕಿರುವ ರಾತ್ರಿ ಕರ್ಫ್ಯೂವನ್ನು ಎಲರೂ ಸರಿಯಾಗಿ ಪಾಲಿಸಬೇಕು ಸರಕಾರದೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಅವರು ವಿನಂತಿಸಿದರು.

ಉಪಚುನಾವಣೆ ನಡೆಯುತ್ತಿರುವ ಮೂರೂ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News