ಅಡ್ಡೂರು: ದನದ ಮಾಂಸ ಸಹಿತ ಆರೋಪಿಗಳ ಸೆರೆ
ಮಂಗಳೂರು, ಎ.9: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಬಳಿಯ ಮನೆಯೊಂದರಲ್ಲಿ ದನವನ್ನು ಕಳವು ಮಾಡಿ ತಂದು ಅಕ್ರಮವಾಗಿ ಕಡಿದು ಮಾಂಸಮಾಡುತ್ತಿರುವ ಆರೋಪದ ಹಿನ್ನಲೆಯಲ್ಲಿ ಬಂದ ಖಚಿತ ಮಾಹಿತಿಯ ಮೇರೆಗೆ ಶುಕ್ರವಾರ ದಾಳಿ ನಡೆಸಿದ ಬಜ್ಪೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಡ್ಡೂರು ಗ್ರಾಮದ ಪಾಂಡೇಲು ಗದ್ದೆಮನೆ ನಿವಾಸಿಗಳಾದ ಅಬ್ದುಲ್ ಮಜೀದ್ ಕಕ್ಕೆ (35) ಮತ್ತು ಪಿ.ಮುಸ್ತಫಾ (30) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಸುಮಾರು 7 ಗಂಟೆಗೆ ದಾಳಿ ನಡೆಸಿದ ಪೊಲೀಸರು ಗ್ರಾಹಕರಿಗೆ ಮಾರಲು ಇಟ್ಟಿದ್ದ 164 ಕೆ.ಜಿ. ದನದ ಮಾಂಸ, ಚೂರಿ, ಕತ್ತಿ, ಇಲೆಕ್ಟ್ರಿಕಲ್ ತಕ್ಕಡಿ ಸಹಿತ ಸುಮಾರು 40 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಮಹೇಶ್ ಕುಮಾರ್ ಎನ್. ಮತ್ತು ಇನ್‌ಸ್ಪೆಕ್ಟರ್ ಕೆ.ಆರ್. ನಾಯ್ಕ್, ಎಸ್ಸೈಗಳಾದ ಪೂವಪ್ಪಎಚ್.ಎಂ, ಕಮಲಾ ಸಿಬ್ಬಂದಿಗಳಾದ ಎಎಸ್ಸೈ ಮುಹಮ್ಮದ್, ರಾಮ ಪೂಜಾರಿ, ಸಿಬ್ಬಂದಿಗಳಾದ ಸಂತೋಷ ಡಿ.ಕೆ, ರಶೀದ್ ಶೇಖ್, ಪುರುಷೋತ್ತಮ, ರಾಜೇಶ್, ಗಿರೀಶ್, ವಕೀಲ್ ಎನ್. ಲಮಾಣಿ, ಲಕ್ಷ್ಮಣ ಕಾಂಬ್ಳೆ, ಸಿದ್ದಲಿಂಗಯ್ಯ, ಸಂಜೀವ ಪಾಲ್ಗೊಂಡಿದ್ದರು.