×
Ad

ಕಾನ್ಪುರ ಐಐಟಿಯಲ್ಲಿ ಮಿಂಚಿದ ಎಂಐಟಿ ವಿದ್ಯಾರ್ಥಿಗಳು

Update: 2021-04-09 21:51 IST

ಮಣಿಪಾಲ, ಎ.9: ಕಾನ್ಪುರ ಐಐಟಿ ಇತ್ತೀಚೆಗೆ ಆಯೋಜಿಸಿದ ಅದರ ವಾರ್ಷಿಕ ಟೆಕ್‌ಫೆಸ್ಟ್‌ನಲ್ಲಿ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳು ಎರಡು ತಂಡಗಳು ಎರಡು ಮತ್ತು ಮೂರನೇ ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿವೆ.

ಕಾನ್ಪುರ ಐಐಟಿ ಆಯೋಜಿಸಿದ ಟೆಕ್‌ಕ್ರಿಟಿ-ಏರೋಡೆಸ್ ವಾರ್ಷಿಕ ಟೆಕ್‌ಫೆಸ್ಟ್‌ನಲ್ಲಿ ಟೀಮ್ ವ್ಯೋಮ್‌ನ ಸದಸ್ಯರಾದ ಏರೋಸ್ಪೇಸ್‌ನ ಪ್ರಣವ್ ಗುಪ್ತ, ವೇದಾಂಗ ಪ್ರದೀಪ್ ಹಾಗೂ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್‌ನ ತನ್ಮಯಕುಮಾರ್ ಅವರು ಎರಡನೇ ಸ್ಥಾನ ಪಡೆದರೆ, ಟೀಮ್ ಧಾರಾದ ಸದಸ್ಯರಾದ ಏರೋಸ್ಪೇಸ್‌ನ ನೆಹಿ ಸಿನ್ಹಾ, ಸಾಯಿ ಸಂಕಲ್ಪ ಹಾಗೂ ಶೃದ್ಧಾ ಶೇಷಾದ್ರಿ ಅವರು ಮೂರನೇ ಸ್ಥಾನವನ್ನು ಪಡೆದರು ಎಂದು ಎಂಐಟಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News