ಮಹಾರಾಷ್ಟ್ರದ ಬಳಿಕ ಈಗ ರಾಜಸ್ಥಾನದಲ್ಲಿ ಕೋವಿಡ್-19 ಲಸಿಕೆಯ ಕೊರತೆಯ ಕೂಗು

Update: 2021-04-09 17:56 GMT

ಜೈಪುರ,ಎ.9: ಮಹಾರಾಷ್ಟ್ರದ ಬಳಿಕ ಈಗ ಕೊರೋನವೈರಸ್ ಲಸಿಕೆಯ ಕೊರತೆಯನ್ನು ಪ್ರಸ್ತಾಪಿಸಿರುವ ರಾಜಸ್ಥಾನವು,ತಕ್ಷಣದ ಪೂರೈಕೆಗಾಗಿ ಪ್ರಧಾನಿಗಳಿಗೆ ಪತ್ರವನ್ನು ಬರೆದಿದೆ.

ಎರಡು ದಿನಗಳಲ್ಲಿ ರಾಜ್ಯದಲ್ಲಿ ಲಸಿಕೆ ಸಂಗ್ರಹವು ಮುಗಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು,ಇನ್ನೂ ಕನಿಷ್ಠ 30 ಲಕ್ಷ ಡೋಸ್ ಲಸಿಕೆಯನ್ನು ಪೂರೈಸುವಂತೆ ಕೋರಿಕೊಂಡಿದ್ದಾರೆ.

ಎ.7ರವರೆಗೆ ರಾಜ್ಯದಲ್ಲಿ 86,89,770 ಡೋಸ್ ಲಸಿಕೆಯನ್ನು ಫಲಾನುಭವಿಗಳಿಗೆ ನೀಡಲಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ತನ್ಮಧ್ಯೆ ಶುಕ್ರವಾರ ಬೆಳಿಗ್ಗೆ ಒಂಭತ್ತು ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1,31,968 ಹೊಸ ಸೋಂಕಿನ ಪ್ರಕರಣಗಳು ಮತ್ತು 780 ಸಾವುಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News