ಐಪಿಎಲ್: ಮುಂಬೈ ಇಂಡಿಯನ್ಸ್ ವಿರುದ್ಧ ಆರ್ ಸಿಬಿಗೆ ರೋಚಕ ಜಯ

Update: 2021-04-09 18:09 GMT
photo: //twitter.com/IPL

ಚೆನ್ನೈ: ಎಬಿ ಡಿವಿಲಿಯರ್ಸ್ (48, 27 ಎಸೆತ 4 ಬೌಂಡರಿ, 2 ಸಿಕ್ಸರ್), ಗ್ಲೆನ್ ಮ್ಯಾಕ್ಸ್ ವೆಲ್ (39, 28 ಎಸೆತ,3 ಬೌಂ.2 ಸಿ.) ಹಾಗೂ ನಾಯಕ ವಿರಾಟ್ ಕೊಹ್ಲಿ(33,29 ಎಸೆತ, 4 ಬೌಂ. ) ಸಮಯೋಚಿತ ಬ್ಯಾಟಿಂಗ್  ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಶುಕ್ರವಾರ ಆರಂಭವಾದ 14ನೇ ಆವೃತ್ತಿಯ ಐಪಿಎಲ್ ನ ಮೊದಲ ಪಂದ್ಯದಲ್ಲಿ 2 ವಿಕೆಟ್ ಗಳ ಅಂತರದಿಂದ ರೋಚಕ ಜಯ ಗಳಿಸಿದೆ.

ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಗೆಲ್ಲಲು 160 ರನ್ ಗುರಿ ಬೆನ್ನಟ್ಟಿದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು. ಮುಂಬೈ ಪರ ಜಸ್ ಪ್ರೀತ್ ಬುಮ್ರಾ(2-26) ಹಾಗೂ ಮಾರ್ಕೊ ಜಾನ್ಸನ್ (2-28)ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಬ್ಯಾಟಿಂಗ್ ಗೆ ಅಹ್ವಾನಿಸಲ್ಪಟ್ಟಿದ್ದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ  ಮಧ್ಯಮ ವೇಗದ ಬೌಲರ್ ಹರ್ಷಲ್ ಪಟೇಲ್ (5-27)ಉತ್ತಮ ಬೌಲಿಂಗ್ ದಾಳಿಯ ಹೊರತಾಗಿಯೂ ಆರಂಭಿಕ ಆಟಗಾರ ಕ್ರಿಸ್ ಲಿನ್(49, 35 ಎಸೆತ, 4 ಬೌಂಡರಿ, 3 ಸಿಕ್ಸರ್),ಸೂರ್ಯಕುಮಾರ್ ಯಾದವ್(31, 23 ಎಸೆತ, 4 ಬೌಂ.1 ಸಿ.) ಹಾಗೂ ಇಶಾನ್ ಕಿಶನ್(28, 19 ಎಸೆತ, 2 ಬೌಂ.1 ಸಿ.) ಎರಡಂಕೆಯ ಸ್ಕೋರ್ ನೆರವನಿಂದ   ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು.

ಪಟೇಲ್ ಐಪಿಎಲ್ ನಲ್ಲಿ ಮುಂಬೈ ವಿರುದ್ದ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎಂಬ ಕೀರ್ತಿಗೆ ಭಾಜನರಾದರು. ಅಂತಿಮ ಓವರ್ ನಲ್ಲಿ ಮುಂಬೈನ 3 ವಿಕೆಟ್ ಗಳನ್ನು ಪಡೆದ 30ರ ಹರೆಯದ ಪಟೇಲ್ ಎದುರಾಳಿ ತಂಡವನ್ನು 159ಕ್ಕೆ ನಿಯಂತ್ರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News