ತನಿಖೆಗೆ ಆಗಮಿಸಿದ್ದ ಬಿಹಾರ ಪೊಲೀಸ್ ಅಧಿಕಾರಿಯನ್ನು ಥಳಿಸಿ ಕೊಂದ ಬಂಗಾಳ ಗ್ರಾಮಸ್ಥರು

Update: 2021-04-10 11:48 GMT
photo: Indiatoday

ಕೊಲ್ಕತ್ತಾ: ಬೈಕ್ ಕಳ್ಳತನ ಪ್ರಕರಣದ ತನಿಖೆಗಾಗಿ ಪಶ್ಚಿಮ ಬಂಗಾಳದ ಉತ್ತರ್ ದಿನಾಜ್ಪುರ್ ಜಿಲ್ಲೆಗೆ ಆಗಮಿಸಿದ್ದ ಬಿಹಾರದ ಪೊಲೀಸ್ ಅಧಿಕಾರಿ ಅಶ್ವಿನಿ ಕುಮಾರ್ ಎಂಬವರನ್ನು ಗೋಲ್‍ಪೊಖರ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಉದ್ರಿಕ್ತ ಜನರು ಥಳಿಸಿ ಸಾಯಿಸಿದ್ದಾರೆ.

ಕಳ್ಳತನ ಆರೋಪಿಯೊಬ್ಬನ ಶೋಧ ಕಾರ್ಯಾಚರಣೆಗೆ ಇಳಿದಿದ್ದ ಅಶ್ವಿನಿ ಕುಮಾರ್ ಅವರು ನೆರೆಯ ಬಂಗಾಳದ ಪಣಜಿಪುರ ಠಾಣಾ ವ್ಯಾಪ್ತಿಯ ಸ್ಥಳವೊಂದಕ್ಕೆ ದಾಳಿ ನಡೆಸಲು ಇಚ್ಛಿಸಿದ್ದರೆನ್ನಲಾಗಿದೆ ಆದರೆ ಸ್ಥಳೀಯ ಬಂಗಾಳ ಪೊಲೀಸರಿಂದ ಅವರಿಗೆ ನಿರೀಕ್ಷಿತ ಸಹಕಾರ ದೊರಕಿರಲಿಲ್ಲ ಎಂದು ಆರೋಪಿಸಲಾಗಿದೆ. ಅಶ್ವಿನಿ ಕುಮಾರ್ ಅವರು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿದ್ದಾಗ ತಂಡವೊಂದರನ್ನು ಕಳುಹಿಸುವ ಭರವಸೆ ನೀಡಲಾಗಿತ್ತು ಆದರೆ ಯಾರನ್ನೂ ಕಳುಹಿಸಲಾಗಿರಲಿಲ್ಲ.

ಅಶ್ವಿನಿ ಅವರು ಉತ್ತರ್ ದಿನಾಜ್ಪುರ್‍ನ ಗ್ರಾಮಕ್ಕೆ ಹೋದಾಗ ಅಲ್ಲಿನ ಜನರು ಕಲ್ಲು ದೊಣ್ಣೆಗಳಿಂದ ಅವರಿಗೆ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡಿದ್ದ ಅಶ್ವಿನಿ ಕುಮಾರ್ ಅಲ್ಲಿಯೇ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಪಡಿಸಿಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News