ಬೆಂಗರೆ ಎಸ್‌ಡಿಪಿಐ ಪಕ್ಷದ ಕಚೇರಿ ಉಧ್ಘಾಟನೆ
Update: 2021-04-10 19:48 IST
ಬೆಂಗರೆ.ಎ:10: ಎಸ್‌ಡಿಪಿಐ ಪಕ್ಷದ ಬೆಂಗರೆ (60 ಮತ್ತು11ನೇ ವಾರ್ಡ್) ಕಚೇರಿಯನ್ನು ಶುಕ್ರವಾರ ಕಾರ್ಪೊರೇಟರ್ ಮುನೀಬ್ ಬೆಂಗರೆ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಕಳೆದ ಹನ್ನೊಂದು ವರ್ಷದಲ್ಲಿ ಎಸ್‌ಡಿಪಿಐ ಪಕ್ಷವು ನಿರಂತರವಾಗಿ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿದುದರ ಫಲವಾಗಿ ನಾನಿಂದು ಜನಪ್ರತಿನಿಧಿಯಾಗಲು ಸಾಧ್ಯವಾಗಿದೆ ಎಂದರು.
ಎಸ್‌ಡಿಪಿಐ ಬೆಂಗರೆ ವಲಯ ಅಧ್ಯಕ್ಷ ವದೂದ್ ಬೆಂಗರೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಜಿಲ್ಲಾ ಕಾರ್ಯದರ್ಶಿಗಳಾದ ಅನ್ವರ್ ಸಾದತ್ ಬಜತ್ತೂರ್, ಅಶ್ರಫ್ ಮಂಚಿ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸುಹೈಲ್ ಖಾನ್, ಉಪಾಧ್ಯಕ್ಷ ಸಿದ್ದೀಕ್ ಬೆಂಗರೆ, ಪಿಎಫ್‌ಐ ಬೆಂಗರೆ ವಲಯ ಕಾರ್ಯದರ್ಶಿ ಬಿಲಾಲ್, ವಾರ್ಡ್ ಉಪಾಧ್ಯಕ್ಷ ಅಶ್ರಫ್ ಎ.ಸಿ.ಎ, 11ನೇ ವಾರ್ಡ್‌ನ ಕಾರ್ಯದರ್ಶಿ ಅಸ್ಗರ್ ಉಪಸ್ಥಿತರಿದ್ದರು. ರಫೀಕ್ ಕಾರ್ಯಕ್ರಮ ನಿರೂಪಿಸಿದರು.